Advertisement
ಬಿಡಿಎ 2,652 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಒದಗಿಸುವ ಕಾಮಗಾರಿಯನ್ನು 2017-18ರಿಂದ ಆರಂಭಿಸಲಾಗಿದೆ. ರಸ್ತೆ, ಚರಂಡಿ, ವಿದ್ಯುತ್ ಕಂಬ ಇನ್ನಿತರ ಮೂಲಸೌಕರ್ಯ ಕಾಮಗಾರಿಗಳಿಗಾಗಿ 2,600 ಕೋಟಿ ರೂ. ನಿಗದಿ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಆರಂಭಿಸಲಾಗಿದ್ದರೂ, ಅನುದಾನ ಕೊರತೆ ಎದುರಾಗುವಂತಾಗಿದೆ.
Related Articles
Advertisement
10 ಸಾವಿರ ನಿವೇಶನದಾರರಿಗೆ ಸಮಸ್ಯೆ
ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ 9,971 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈವರೆಗೆ ಬಡಾವಣೆಯಲ್ಲಿ ಒಂದೂ ಕಟ್ಟಡ ನಿರ್ಮಾಣವಾಗಿಲ್ಲ. ಮೂಲಸೌಕರ್ಯ ಕೊರತೆಯ ಕಾರಣದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಯಾವೊಬ್ಬ ನಿವೇಶನದಾರರು ಮನಸ್ಸು ಮಾಡುತ್ತಿಲ್ಲ. ಲೆಕ್ಕಪರಿಶೋಧನೆ ನಡೆಸಿ ಮೂಲಸೌಕರ್ಯ ಅನುಷ್ಠಾನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾದ ಬಿಡಿಎ ವೃಥಾ ಕಾಲಹರಣ ಮಾಡುತ್ತಿರುವುದು ನಿವೇಶನದಾರರು ಸಮಸ್ಯೆ ಅನುಭವಿಸುವಂತಾಗಿದೆ. 2016-17ರಲ್ಲಿ ಮೂಲಸೌಕರ್ಯ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯೋಜನಾ ವೆಚ್ಚ ಸಿದ್ಧಪಡಿಸುವ ಸಂದರ್ಭದಲ್ಲಿ ಕಡಿಮೆ ವೆಚ್ಚವನ್ನು ಅಂದಾಜಿಸಿದ್ದೇ ಈಗಿನ ಸಮಸ್ಯೆಗೆ ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಮೂಲಸೌಕರ್ಯ ವೆಚ್ಚದ ಕುರಿತಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಸಂದರ್ಭದಲ್ಲಿ ಭೂಮಿಯ ಸಮರ್ಪಕ ವಿಸ್ತೀರ್ಣ, ರಸ್ತೆಯ ಉದ್ದ ಎಷ್ಟಾಗಲಿದೆ? ವಿದ್ಯುತ್ ಕಂಬಗಳು ಎಷ್ಟು ಅವಶ್ಯಕವಿದೆ? ಚರಂಡಿಯ ಉದ್ದ ಎಷ್ಟಿರಲಿದೆ? ಎಂಬ ಬಗ್ಗೆ ಸಮರ್ಪಕವಾಗಿ ಲೆಕ್ಕ ಹಾಕದ ಕಾರಣ ನಿಖರ ಯೋಜನಾ ವೆಚ್ಚವನ್ನು ನಿಗದಿ ಮಾಡುವಲ್ಲಿ ಬಿಡಿಎ ಅಧಿಕಾರಿಗಳು ಎಡವಿದ್ದು ಗೊಂದಲಕ್ಕೆ ಕಾರಣವಾಗಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಡಿಎ ಕಾಲಹರಣ ಮಾಡುತ್ತಿದೆ. ಇದರಿಂದಾಗಿ ನಿವೇಶನದಾರರು ಮನೆ ನಿರ್ಮಾಣ ಸೇರಿ ಇನ್ನಿತರ ಚಟುವಟಿಕೆ ಮಾಡಲು ಸಾಧ್ಯವಾಗದಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಉತ್ತರಿಸುತ್ತಿಲ್ಲ. ಶೀಘ್ರ ವಿವಾದ ಇತ್ಯರ್ಥಪಡಿಸಿ ಮೂಲಸೌಕರ್ಯ ಕಲ್ಪಿಸಬೇಕು. ●ಸೂರ್ಯಕಿರಣ್, ನಿವೇಶನದಾರ
●ಗಿರೀಶ್ ಗರಗ