Advertisement
ರಾಜ್ಯದ 1 ಸಾವಿರ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಬೋಧನೆ ಜೂನ್‌ನಿಂದ ಆರಂಭವಾಗಿದೆ. ಸರಕಾರವು ಒಂದನೇ ತರಗತಿ ಆಂಗ್ಲ ಶಿಕ್ಷಣಕ್ಕೆ ಗರಿಷ್ಠ 30 ಮಕ್ಕಳ ಮಿತಿಯನ್ನು ನಿಗದಿಗೊಳಿಸಿತ್ತು. ಆದರೆ ಜಿಲ್ಲೆಯ ಕೆಲವು ಶಾಲೆಗಳಲ್ಲಿ 30ಕ್ಕಿಂತಲೂ ಹೆಚ್ಚು ಮಕ್ಕಳು ದಾಖಲಾಗಿರುವುದರಿಂದ ಪುಸ್ತಕ ಕೊರತೆ ಎದುರಾಗಿದೆ. ಆಯ್ಕೆ ಮಾಡಿದ ಪ್ರತಿ ಶಾಲೆಗೆ 30 ಪುಸ್ತಕಗಳನ್ನು ಕಳುಹಿಸಿ ಕೊಡಲಾಗಿತ್ತು. ಹೆಚ್ಚುವರಿ ಮಕ್ಕಳಿಗೆ ಪುಸ್ತಕದ ಕೊರತೆ ಕಾಡುತ್ತಿದೆ.
ಕೆಲವು ಶಾಲೆಗಳಲ್ಲಿ ಒಂದನೇ ತರಗತಿಗೆ ಕನ್ನಡ ನಲಿಕಲಿ ಪುಸ್ತಕ ಇನ್ನೂ ಬಂದಿಲ್ಲ. ಅಲ್ಲಿಯೂ ಶಿಕ್ಷಕರು ಇರುವ ಪುಸ್ತಕವನ್ನೇ ಜೆರಾಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ ಎಂದು ಶಾಲೆಯೊಂದರ ಮುಖ್ಯ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಒಂದನೇ ತರಗತಿಯ ಆಂಗ್ಲ ಮಾಧ್ಯಮದಲ್ಲಿ 30ಕ್ಕಿಂತ ಹೆಚ್ಚು ಮಕ್ಕಳಿರುವಲ್ಲಿ ಮಾತ್ರ ಪಠ್ಯಪುಸ್ತಕದ ಕೊರತೆ ಎದುರಾಗಿದೆ. ಈಗಾಗಲೇ ಮರು ಮುದ್ರಣಕ್ಕೆ ಹೋಗಿದ್ದು, ಜಿಲ್ಲಾ ಇಲಾಖೆಗೆ ಬಂದ ತತ್‌ಕ್ಷಣ ಮಕ್ಕಳಿಗೆ ನೀಡಲಾಗುವುದು
-ವೈ. ಶಿವರಾಮಯ್ಯ, ಡಿಡಿಪಿಐ
Related Articles
– ಅಶೋಕ್ ಕಾಮತ್, ಕುಂದಾಪುರ ಬಿಇಒ
Advertisement