Advertisement

ಆಧಾರ್‌: ಮಧ್ಯಂತರ ಆದೇಶವಿಲ್ಲ

09:50 AM Mar 28, 2018 | Karthik A |

ನವದೆಹಲಿ: ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ರೀತಿಯ ಕಲ್ಯಾಣ ಕಾರ್ಯಕ್ರಮಗಳ ಲಾಭ ಪಡೆಯಲು ಮಾ.31 ಕೊನೆಯ ದಿನವಾಗಿದ್ದು, ಅದರ ವಿಸ್ತರಣೆಗೆ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಆದರೆ ಸರ್ಕಾರಿ ಸಂಸ್ಥೆಗಳು ಫ‌ಲಾನುಭವಿಗಳ ಬಯೋಮೆಟ್ರಿಕ್‌ ಮಾಹಿತಿಯನ್ನು ಕೇಂದ್ರ ಸರ್ಕಾರದ ನಿಧಿಗೆ ಲಿಂಕ್‌ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಇದೇ ನಿಧಿಯಿಂದ ವಿವಿಧ ಯೋಜನೆಗಳ ಫ‌ಲಾನುಭವಿಗಳ ಖಾತೆಗೆ ಸಬ್ಸಿಡಿ ಮೊತ್ತ ವರ್ಗಾವಣೆಯಾಗುತ್ತದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಮಂಗಳವಾರ ನಡೆದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

Advertisement

ಏನೂ ಆಗಿಲ್ಲ: ಆಧಾರ್‌ನ ದತ್ತಾಂಶ ಕಳೆದ ಏಳು ವರ್ಷಗಳಿಂದ ಯಾವ ರೀತಿಯಲ್ಲೂ ಸೋರಿಕೆಯಾಗಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ (ಯುಐಡಿಎಐ) ಸಿಇಒ ಅಜಯ್‌ ಭೂಷಣ್‌ ಪಾಂಡೆ ಸಾಂವಿಧಾನಿಕ ಪೀಠಕ್ಕೆ ಅರಿಕೆ ಮಾಡಿದ್ದಾರೆ. ಇದರ ಜತೆಗೆ ಆಧಾರ್‌ ಲಿಂಕ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಪರ ವಕೀಲರು ಪ್ರಾಧಿಕಾರಕ್ಕೆ 20 ಪ್ರಶ್ನೆಗಳನ್ನು ಸಲ್ಲಿಸಿದ್ದಾರೆ,

ಪ್ಯಾನ್‌ – ಆಧಾರ್‌ ಲಿಂಕ್‌ ಅವಧಿ ಜೂ.30ಕ್ಕೆ ವಿಸ್ತರಣೆ
ನಿಮ್ಮ ಪ್ಯಾನ್‌ಕಾರ್ಡ್‌ ಮತ್ತು ಆಧಾರ್‌ ಲಿಂಕ್‌ ಮಾಡಿಲ್ಲವೇ? ಮಾ.31ಕ್ಕೆ ಇದ್ದ ಕೊನೆಯ ದಿನಾಂಕವನ್ನು ಜೂ.30ಕ್ಕೆ ವಿಸ್ತರಿಸಲಾಗಿದೆ. ಈ ಬಗ್ಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಂಗಳವಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಈಗಾಗಲೇ ನಾಲ್ಕು ಬಾರಿ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು. ಲಿಂಕ್‌ ಮಾಡಲು ಇಲ್ಲಿಗೆ ಭೇಟಿ ನೀಡಿ www.incometaxindiaefiling.gov.in

Advertisement

Udayavani is now on Telegram. Click here to join our channel and stay updated with the latest news.

Next