Advertisement

ತೈಲದ ಮೇಲೆ ಅಬಕಾರಿ ಸುಂಕ ಇಳಿಕೆಯಿಲ್ಲ: ಜೇಟ್ಲಿ

10:56 AM Jun 19, 2018 | Team Udayavani |

ಹೊಸದಿಲ್ಲಿ: ಸರಕಾರಕ್ಕೆ ಆದಾಯದ ಮೂಲವೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವಾಗಿದ್ದು, ಇದರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ನಾಗರಿಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡಬೇಕಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಈ ಮೂಲಕ, ಸದ್ಯದ ಮಟ್ಟಿಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವುದು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Advertisement

ಅಲ್ಲದೆ, ಜನರು ತೆರಿಗೆ ತಪ್ಪಿಸುವುದನ್ನು ನಿಲ್ಲಿಸಬೇಕು. ಜನ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡಿದರೆ, ಸಹಜವಾಗಿಯೇ ತೈಲ ಉತ್ಪನ್ನಗಳ ಮೇಲೆ ಸರಕಾರದ ಅವಲಂಬನೆ ಕಡಿಮೆಯಾಗುತ್ತದೆ. ಹೀಗಾಗಿ ತೈಲದ ಮೇಲಿನ ತೆರಿಗೆಯೂ ಕಡಿಮೆಯಾಗುತ್ತದೆ ಎಂದು ಜೇಟ್ಲಿ ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಸಾಮಾನ್ಯವಾಗಿ ನೌಕರವರ್ಗ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುತ್ತದೆ. ಆದರೆ ಇತರ ವರ್ಗಗಳು ತಮ್ಮ ತೆರಿಗೆ ಪಾವತಿ ಪ್ರಮಾಣ ವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಈ ಮಧ್ಯೆ, ಮಾರ್ಚ್‌ನಲ್ಲಿ ಕೊನೆಗೊಂಡ ತ್ತೈಮಾಸಿಕದಲ್ಲಿ ವಿತ್ತೀಯ ಪ್ರಗತಿ ಶೇ. 7.7 ರಲ್ಲಿದ್ದು, ಭಾರತವನ್ನು ವಿಶ್ವದಲ್ಲೇ ಬೆಳವಣಿಗೆ ಕಾಣುತ್ತಿರುವ ಪ್ರಮುಖ ಆರ್ಥಿಕತೆ ಯನ್ನಾಗಿಸಿದೆ. ಅದರಲ್ಲೂ ಮುಂದಿನ ದಿನಗಳಲ್ಲಿ ಪ್ರಗತಿ ತ್ವರಿತವಾಗಿರಲಿದೆ ಎಂದು ಅವರು ಹೇಳಿದ್ದಾರೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಲೀಟರ್‌ಗೆ 25 ರೂ. ಕಡಿತಗೊಳಿಸುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಲಹೆ ನಮ್ಮನ್ನು ಸಿಲುಕಿಹಾಕಿಸುವಂಥದ್ದು ಎಂದಿದ್ದಾರೆ.

ವಿತ್ತೀಯ ಕೊರತೆ ಶೇ. 3.3ರಲ್ಲಿ: ಚುನಾವಣೆಯಿದ್ದರೂ ಈ ವಿತ್ತ ವರ್ಷದಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ. 3.3ರಲ್ಲೇ ಇರಲಿದೆ ಎಂದು ಹಣಕಾಸು ಸಚಿವ ಪಿಯೂಷ್‌ ಗೋಯೆಲ್‌ ಹೇಳಿದ್ದಾರೆ. ಆದರೆ ಇದಕ್ಕೆ ವೆಚ್ಚ ಕಡಿತ ಮಾಡುವುದಿಲ್ಲ. ಸರಕಾರದ ಬಳಿ ಹೆಚ್ಚುವರಿ ಸಂಪನ್ಮೂಲವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next