Advertisement

ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೂ ತಟ್ಟಿದ ಕೊರೊನಾ ವೈರಸ್ ಬಿಸಿ

10:18 AM Mar 17, 2020 | keerthan |

ಶಿವಮೊಗ್ಗ: ಕೊರೊನಾ ವೈರಸ್ ಆತಂಕದ ಹಿನ್ನಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Advertisement

ಹೊರರಾಜ್ಯ ಹಾಗೂ ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಕೊರೊನಾ ಹರಡುವ ಆತಂಕದದಿಂದಾಗಿ ಜೋಗ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಜಲಪಾತ ವೀಕ್ಷಣೆಗೆ ತೆರಳುವ ಗೇಟ್ ಗೆ ಬೀಗ ಹಾಕಲಾಗಿದೆ.

ಹತ್ತು ದಿನಗಳ ಕಾಲ ಜೋಗ ಜಲಪಾತ ವೀಕ್ಷಣೆಗೆ ನಿಷೇಧ ಹೇರಲಾಗಿದ್ದು,  ಸರ್ಕಾರದ ಸೂಚನೆ ಮೇರೆಗೆ ಡಿಸಿ ಆದೇಶದ ಹಿನ್ನೆಲೆಯಲ್ಲಿ ಜೋಗ ಜಲಪಾತದ ಎಂಟ್ರಿ ಗೇಟ್ ಬಂದ್ ಮಾಡಲಾಗಿದೆ.

ಜಲಪಾತ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರು ಅವಕಾಶ ಸಿಗದೆ ನಿರಾಶೆಯಿಂದ ವಾಪಸ್ಸಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next