Advertisement

ಹಿಂದುತ್ವ ಅಬ್ಬರದಲ್ಲಿ ರಾಮಂದಿರ ಗೌಣ

12:59 AM Apr 02, 2019 | Sriram |

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಪ್ರಚಾರ, ಹಿಂದುತ್ವದ ಅಬ್ಬರದಲ್ಲಿ ರಾಮ ಮಂದಿರ ವಿಷಯ ಕಡೆಗಣಿಸಲ್ಪಟ್ಟಿದೆ ಎಂದು ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮ ಮಂದಿರದ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಾಮ ಮಂದಿರ ನಿರ್ಮಾಣಕ್ಕೆ ಆದ್ಯತೆ ಸಿಗಬೇಕು. ಹಿಂದೂಗಳಿಗಷ್ಟೇ ಅಲ್ಲ, ಮುಸಲ್ಮಾನರಿಗೂ ಶ್ರೀರಾಮ ಪೂರ್ವಜ. ಪೂರ್ವಜರನ್ನು ನಾವು ಗೌರವಿಸಬೇಕು. ಹಿಂದುತ್ವ ಪ್ರಮುಖ ಚುನಾವಣಾ ವಿಷಯವಾಗಿದ್ದು, ಹಿಂದುತ್ವವಿಲ್ಲದೇ ಚುನಾವಣೆ ಸಾಧ್ಯವಿಲ್ಲ ಎಂಬುದು ಎಲ್ಲ ರಾಜಕೀಯ ಪಕ್ಷಗಳಿಗೆ ಮನವರಿಕೆಯಾಗಿದೆ, ಬಿಜೆಪಿಯವರಷ್ಟೇ ಅಲ್ಲ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಕೂಡ ಟೆಂಪಲ್‌ ರನ್‌ ಮಾಡುತ್ತಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ಸಕ್ರಿಯವಾಗಿದ್ದೆ, ರಾಜಕೀಯ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದೆ. ಆಗ ಮಾಧ್ಯಮದವರು ಬಾಬಾ ಸಕ್ರಿಯರಾಗಿದ್ದಾರೆ ಎಂದು ಹೇಳಿದರು. ಮಾಧ್ಯಮದವರ ಮಾತಿನಂತೆ ನಾನೀಗ ಚುನಾವಣಾ ರಾಜಕೀಯದಲ್ಲಿ ಸಕ್ರಿಯನಾಗಿಲ್ಲ. ನಾನು ದೇಶದ ಒಳಿತಿಗೆ ದಿನದ 18-20 ಗಂಟೆ ದುಡಿಯುತ್ತಿದ್ದೇನೆ. ರಾಜಕಾರಣ ನನಗೆ ಆಪತ್ಕಾಲಿಕ ಧರ್ಮವಾಗಿದೆ. ದೇಶಕ್ಕೆ ಆಪತ್ತು ಒದಗಿದಾಗ ಮಾತ್ರ ರಾಜಕೀಯ ಕುರಿತು ಮಾತಾಡುತ್ತೇನೆ ಎಂದರು.

ಲೋಕಸಭಾ ಚುನಾವಣೆ 20-20 ಕ್ರಿಕೆಟ್‌ ಪಂದ್ಯದಂತೆ ರೋಚಕವಾಗಿರಲಿದೆ. ಒಂದೆಡೆ ಮಹಾಘಟಬಂಧನ್‌ ಬಲಗೊಳ್ಳುತ್ತಿದ್ದರೆ, ಇನ್ನೊಂದೆಡೆ ಎನ್‌ಡಿಎ ಕೂಡ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ. ಸುದ್ದಿ ವಾಹಿನಿಗಳ ಟಿಅರ್‌ಪಿ ಹಾಗೂ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚುತ್ತಿದೆ. ನಾನು ಯಾವುದೇ ಪಕ್ಷದೊಂದಿಗಿಲ್ಲ. ದೇಶದೊಂದಿಗೆ ಇದ್ದೇನೆ. ಯಾರು ದೇಶಕ್ಕೆ ಒಳಿತು ಮಾಡುತ್ತಾರೋ ಅವನ್ನು ಬೆಂಬಲಿಸುತ್ತೇನೆ. ದೇಶದಲ್ಲಿ ಸಾಮಾಜಿಕ ಪಿಡುಗುಗಳಿವೆ. ಆದರೂ ಸರ್ಜಿಕಲ್‌ ಸ್ಟ್ರೈಕ್‌, ಏರ್‌ ಸ್ಟ್ರೈಕ್‌, ಸ್ಯಾಟಲೈಟ್‌ ಸ್ಟ್ರೈಕ್‌ ವಿಷಯಗಳು ಚರ್ಚಿತ ವಿಷಯಗಳಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next