Advertisement

ಸಶ‌ಸ್ತ್ರ ಪಡೆಗಳಿಂದ ಸ್ತ್ರೀಯರನ್ನು ಹೊರಗಿಡಲ್ಲ: ರಾಜನಾಥ್‌ ಸಿಂಗ್‌

09:54 AM Mar 10, 2020 | Hari Prasad |

ಹೊಸದಿಲ್ಲಿ: ಕಳೆದ ಕೆಲವು ವರ್ಷಗಳಲ್ಲಿ ಸಶ‌ಸ್ತ್ರ ಪಡೆ ಸೇರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಪಡೆಗಳ ಸೇರ್ಪಡೆಯಿಂದ ಅವರನ್ನು ದೂರ ಇರಿಸುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ನೀತಿ ಆಯೋಗ ಆಯೋಜಿಸಿದ್ದ ‘ವುಮನ್‌ ಟ್ರಾನ್ಸ್‌ಫಾರ್ಮಿಂಗ್‌ ಇಂಡಿಯಾ ಅವಾರ್ಡ್ಸ್‌’ ಸಮಾರಂಭದಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನದಂದು ನಡೆದ ಪರೇಡ್‌ನ‌ಲ್ಲಿ ಪುರುಷರ ಪಡೆಯನ್ನು ಮುನ್ನಡೆಸಿದ ರಾನಿಯಾ ಶೇರ್ಗಿಲ್‌ ಅವರನ್ನು ಉದಾಹರಣೆಯಾಗಿ ನೀಡಿ, ಹಿಂದೆ ಮಹಿಳೆಯರಿಗೆ ಅವಕಾಶವೇ ಇಲ್ಲದಂತಿದ್ದ ಹಲವು ಕ್ಷೇತ್ರಗಳ ನೇತೃತ್ವವನ್ನು ಇಂದು ಮಹಿಳೆಯರು ವಹಿಸಿದ್ದಾರೆ. ಹೀಗಿರುವಾಗ ಸಶ‌ಸ್ತ್ರ ಪಡೆಗಳಿಂದ ಅವರನ್ನು ಹೊರಗಿಡುವುದಕ್ಕೆ ಅರ್ಥವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next