Advertisement

ಇನ್ನು ನಾಯಿಗಳೂ ನಕಲು!

10:07 AM Dec 19, 2018 | Team Udayavani |

ಬೀಜಿಂಗ್‌: ಹದಿನೈದು ವರ್ಷಗಳ ಹಿಂದೆ ಡಾಲಿ ಎಂಬ ಕುರಿಯನ್ನು ಕ್ಲೋನಿಂಗ್‌ ತಂತ್ರಜ್ಞಾನದಿಂದ ಸೃಷ್ಟಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಚೀನದಲ್ಲಿ ಬಯೋ ಟೆಕ್ನಾಲಜಿ ಕಂಪೆನಿ ನಾಯಿಯನ್ನು ಇದೇ ತಂತ್ರಜ್ಞಾನದಿಂದ ಸೃಷ್ಟಿಸಿದೆ. ಅಂದ ಹಾಗೆ ಅದರ ಹೆಸರು “ಜ್ಯೂಸ್‌’. ಚೀನಿ ಭಾಷೆಯಲ್ಲಿ ನಿರ್ಮಾಣವಾದ ಹಲವು ಸಿನಿಮಾಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅದು ಮುಖ್ಯ ಭೂಮಿಕೆಯಲ್ಲಿ ನಟಿಸಿದೆ. ಹೀಗಾಗಿ ಅದರ ಹೆಸರು ಚೀನದಲ್ಲೀಗ ಮನೆ ಮಾತು. 

Advertisement

ಸೈನೋಜೀನ್‌ ಎಂಬ ಬಯೋಟೆಕ್ನಾಲಜಿ ಸಂಸ್ಥೆ ಬೀದಿಯಲ್ಲಿದ್ದ ನಾಯಿಯನ್ನು ಮೊದಲಿಗೆ ದತ್ತು ಸ್ವೀಕರಿಸಿತ್ತು. ಅನಂತರ ಅದು ಜೀನ್‌ ಅನ್ನು ಸಂಸ್ಕರಿಸಿ 2017ರ ಮೇನಲ್ಲಿ ವಿಶ್ವಾದ್ಯಂತ ಸುದ್ದಿ ಮಾಡಿತ್ತು. ಈ ಪ್ರಯತ್ನದಲ್ಲಿ ಯಶಸ್ವಿಯಾದ ಬಳಿಕ ಅದು ವಾಣಿಜ್ಯಿಕವಾಗಿ ಕ್ಲೋನಿಂಗ್‌ ಸೇವೆಯನ್ನು ಕೈಗೆತ್ತಿಕೊಂಡಿತ್ತು. ಅಂದ ಹಾಗೆ, ಶ್ವಾನ ಪ್ರೇಮಿಗಳು ತಾವು ಹೊಂದಿರುವ ಶ್ವಾನಗಳನ್ನು ಕ್ಲೋನ್‌ ಮಾಡಬೇಕಿದ್ದರೆ 40 ಲಕ್ಷ ರೂ. ವೆಚ್ಚ ಮಾಡಬೇಕು. 

ಸಂಸ್ಥೆಯ ಸಿಇಒ ಮಿ ಜಿಡಾಂಗ್‌ ಮಾತನಾಡಿ, ಸಾಕುಪ್ರಾಣಿಗಳ ಕ್ಲೋನಿಂಗ್‌ ವ್ಯವಸ್ಥೆ ಇನ್ನೂ ಆರಂಭದ ಹಂತದಲ್ಲಿದೆ. ಆರಂಭದಲ್ಲಿ ಜೀನ್‌ ಪರಿಷ್ಕರಣೆ (ಎಡಿಟಿಂಗ್‌)ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಸಂಸ್ಥೆಯ ವಿಜ್ಞಾನಿಗಳು ಹೇಳಿಕೊಳ್ಳುವ ಪ್ರಕಾರ, ಕ್ಲೋನ್‌ ಮಾಡಿದ ನಾಯಿಗಳು ವಿಪರೀತ ಸಂಖ್ಯೆಯಲ್ಲಿ ಮರಿಹಾಕದಂತೆ ತಂತ್ರಜ್ಞಾನ ರೂಪಿಸಿದ್ದಾಗಿ ಹೇಳಿಕೊಂಡಿದ್ದಾರೆ. ಜತೆಗೆ ವೇವಾಗಿ ಓಡಬಲ್ಲ, ಆರೋಗ್ಯವಂತ ದೃಢವಾದ ಶ್ವಾನಗಳ ಸೃಷ್ಟಿಯೂ ಈ ವಿಧಾನದಿಂದ ಸಾಧ್ಯವಿದೆ ಎಂದು ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next