Advertisement
ಬಡವರ ಮನೆ ಬಾಗಿಲಿಗೆ ಆರೋಗ್ಯ ಎಂದು ಬಾಯಿ ಮಾತಿನಲ್ಲಿ ಹೇಳುತ್ತಿರುವ ಸರಕಾರ, ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತಿ ತಳೆಯುತ್ತಿಲ್ಲ. ಆದ ಕಾರಣ, ಅಧಿಕಾರಿಗಳಿಂದ ಹಿಡಿದು ಅಡುಗೆ ಸಿಬಂದಿಯವರೆಗಿನ ಹುದ್ದೆಗಳು ವೆನ್‌ಲಾಕ್, ಲೇಡಿಗೋ ಶನ್ ಆಸ್ಪತ್ರೆ ಮತ್ತು ಐದು ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇವೆ. ಇದರಿಂದ ಇರುವ ಕೆಲವೇ ವೈದ್ಯರು, ಸಿಬಂದಿ ವಾರದ ರಜೆಯನ್ನೂ ತೆಗೆದು ಕೊಳ್ಳದಂತಾಗಿದೆ.
Related Articles
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 11 ವೈದ್ಯರ ಬದಲು 9 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 7 ಮಂದಿ ಕ್ಲರ್ಕ್ ಗಳ ಪೈಕಿ ಒಬ್ಬರಿದ್ದಾರೆ. 31ಡಿ ದರ್ಜೆ ನೌಕರರ ಪೈಕಿ ಓರ್ವ ಮಾತ್ರ ಇದ್ದು, ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಲಾಗಿದೆ. ಎಕ್ಸ್‌ರೇ, ಲ್ಯಾಬ್ ಟೆಕ್ನೀಶಿಯನ್, ಫಾರ್ಮಸಿಸ್ಟ್‌ಗಳಿಲ್ಲ.
Advertisement
ಪುತ್ತೂರು ಕಥೆಯೇ ಬೇರೆ !ಪುತ್ತೂರು ಸರಕಾರಿ ಆಸ್ಪತ್ರೆಯ 15 ಹುದ್ದೆಗಳ ಪೈಕಿ 8 ಖಾಲಿ ಇವೆ. ವೈದ್ಯಾಧಿಕಾರಿ ಹುದ್ದೆಯೂ ತೆರವಾ ಗಿದ್ದು, ಡಾ| ಆಶಾ ಪುತ್ತೂರಾಯ ಪ್ರಭಾರ ಹೊಣೆಯಲ್ಲಿದ್ದಾರೆ. ಹಿರಿಯ ವೈದ್ಯಾಧಿಕಾರಿ, ಫಿಸಿಶಿಯನ್, ಸ್ತ್ರೀರೋಗ ತಜ್ಞ, ಜನರಲ್ ಸರ್ಜನ್, ರೇಡಿಯಾಲಾಜಿಸ್ಟ್, ಜನರಲ್ ಡ್ನೂಟಿ ಮೆಡಿಕಲ್ ಆಫೀಸರ್-2 ಸೇರಿದಂತೆ ಇತರ ಹುದ್ದೆಗಳೂ ಖಾಲಿಯೇ. ಬೆಳ್ತಂಗಡಿ: ಹಲವು ಹುದ್ದೆ ಖಾಲಿ
ಬೆಳ್ತಂಗಡಿ ತಾ. ಆಸ್ಪತ್ರೆಯಲ್ಲೂ ಮುಖ್ಯ ವೈದ್ಯಾಧಿಕಾರಿ ಇಲ್ಲ. ನೇತ್ರ ತಜ್ಞೆ ಡಾ| ವಿದ್ಯಾವತಿ ಪ್ರಭಾರ ವಹಿಸಿ ಕೊಂಡಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇದ್ದು, ಗುತ್ತಿಗೆ ಆಧಾರದಲ್ಲಿ ಓರ್ವರನ್ನು ನೇಮಿಸಿಕೊಳ್ಳಲಾಗಿದೆ. ಹಿರಿಯ ವೈದ್ಯಾಧಿಕಾರಿ, ಶುಶ್ರೂಷಕ ಅಧೀಕ್ಷಕರು ದರ್ಜೆ-2, ಹಿರಿಯ ಪ್ರಯೋಗಶಾಲಾ ತಂತ್ರಜ್ಞ, ಹಿರಿಯ ಮತ್ತು ಕಿರಿಯ ಫಾರ್ಮಸಿಸ್ಟ್, ದ್ವಿತೀಯ ದರ್ಜೆ ಸಹಾಯಕರು, ಕ್ಲರ್ಕ್ ಸೇರಿದಂತೆ ಇತರ ಹುದ್ದೆಗೆ ನೇಮಕವಾಗಿಲ್ಲ. ಬಂಟ್ವಾಳ: 82ರಲ್ಲಿ 44 ಖಾಲಿ
ಬಂಟ್ವಾಳದಲ್ಲಿ 82 ಹುದ್ದೆಗಳ ಪೈಕಿ 38 ಮಂದಿ ಇದ್ದಾರೆ. 30 ಇರಬೇಕಾದ ಗ್ರೂಪ್ ಡಿ ನೌಕರರ ಜಾಗದಲ್ಲಿ ಕೇವಲ 2 ಮಂದಿ ಇದ್ದಾರೆ. ಒಟ್ಟು 44 ಹುದ್ದೆಗಳಿಗೆ ನೇಮಕಾತಿ ನಡೆಯಬೇಕಿದೆ. ಮಂಗಳೂರು: ಶೇ. 20 ಕೊರತೆ
ಮಂಗಳೂರು ತಾಲೂಕಿನ ವಿವಿಧ ಪ್ರಾ. ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬಂದಿ ಸಾಕಷ್ಟಿಲ್ಲ. ಕುಂಪದವು ಗ್ರಾ.ಪ್ರಾ. ಆ. ಕೇಂದ್ರ ಮತ್ತುಸುರತ್ಕಲ್ ಪ್ರಾ.ಆ. ಕೇಂದ್ರದ ವೈದ್ಯರು ಇತ್ತೀಚೆಗೆ ವರ್ಗಾವಣೆಯಾಗಿದ್ದಾರೆ. 15ದಿನ ಗಳಲ್ಲಿ ವೈದ್ಯರ ನಿಯೋಜನೆ ಆಗ ಲಿದ್ದು, ಉಳಿದಂತೆ ಕೆಲವು ಪ್ರಾ.ಆ. ಕೇಂದ್ರ ಗಳಲ್ಲಿ ಶೇ. 20ರಷ್ಟು ಸಿಬಂದಿ ಕೊರತೆ ಇದೆ ಎಂಬುದು ತಾ. ವೈದ್ಯಾಧಿಕಾರಿ ಡಾ| ನವೀನ್ ಕುಮಾರ್. ಉಡುಪಿಯಲ್ಲೂ ಖಾಲಿ
ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ 129 ಹುದ್ದೆಗಳ ಪೈಕಿ 50 ಹುದ್ದೆ ಖಾಲಿ ಇವೆ. ಹಿರಿಯ ಶುಶ್ರೂಷಕರು, ವೈದ್ಯಕೀಯ ಅಧಿಕಾರಿ ಹುದ್ದೆಯೂ ಇಲ್ಲಿ ಭರ್ತಿಯಾಗಿಲ್ಲ. ಕುಂದಾಪುರ ತಾ. ಆಸ್ಪತ್ರೆಯಲ್ಲಿ ಒಟ್ಟು ಮಂಜೂರಾದ 88 ಹುದ್ದೆಗಳ ಪೈಕಿ 34 ಖಾಲಿ ಇದೆ ಎಂದು ಆಸ್ಪತ್ರೆ ಸಿಬಂದಿ ತಿಳಿಸಿದ್ದಾರೆ. ದಿನಕ್ಕೆ 500 ರೋಗಿಗಳು
ವೆನ್‌ಲಾಕ್ ಆಸ್ಪತ್ರೆಯಲ್ಲಿ ದಿನಕ್ಕೆ ಕನಿಷ್ಠ 2 ಸಾವಿರ ಮಂದಿ ಹೊರರೋಗಿಗಳು ಬರುತ್ತಾರೆ. ತಾಲೂಕು ಆಸ್ಪತ್ರೆಗಳಿಗೂ ಪ್ರತಿದಿನ ಕನಿಷ್ಠ 400-500 ರೋಗಿಗಳು ಆಗಮಿಸುತ್ತಾರೆ. 50ರಷ್ಟು ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ. ಖಾಲಿ ಹುದ್ದೆ ವಿವರವನ್ನು ಮೇಲಧಿಕಾರಿಗಳಿಗೆ ಕಳುಹಿಸಲಾ ಗಿದೆ. ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಆದೇಶವಾಗಿದೆ. ಕೆಲವು ಹುದ್ದೆಗಳನ್ನು ಕಾಂಟ್ರಾಕ್ಟ್ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ.
-ಡಾ| ಎಂ. ರಾಮಕೃಷ್ಣ ರಾವ್ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಉಡುಪಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೆಲವು ಹುದ್ದೆಗಳು ಖಾಲಿ ಇವೆ. ವೈದ್ಯರ ನೇಮಕಕ್ಕೆ ಕೌನ್ಸೆಲಿಂಗ್ ಪ್ರಕ್ರಿಯೆಗಳೂ ನಡೆಯುತ್ತಿದ್ದು, ಬಳಿಕ ವೈದ್ಯರ ನೇಮಕ ಆಗಬಹುದು.
-ಡಾ| ರಾಮ ರಾವ್ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಧನ್ಯಾ ಬಾಳೆಕಜೆ