Advertisement
ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಚಿಬಿದ್ರೆ, ತೋಟ ತ್ತಾಡಿ, ನೆರಿಯ, ಚಾರ್ಮಾಡಿ, ಪುದುವೆಟ್ಟು ಈ ಐದು ಗ್ರಾಮ, ತೀರಾ ಹಿಂದುಳಿದ ಪ್ರದೇಶವಾದ ಬಾಂಜಾರು ಮಲೆ ವರೆಗಿನ ವ್ಯಾಪ್ತಿ ಯನ್ನು ಹೊಂದಿದೆ. ಸುಮಾರು 21,492 ಜನರು ಈ ಆರೋಗ್ಯ ಕೇಂದ್ರವನ್ನು ಅವಲಂಬಿ ಸಿದ್ದಾರೆ. ಲಾಕ್‌ಡೌನ್ ಆರಂಭಕ್ಕೂ ಮೊದಲು ಉಜಿರೆ ಪ್ರಾ.ಆರೋಗ್ಯ ಕೇಂದ್ರದ ವೈದ್ಯರು ಪ್ರತಿ ಮಂಗಳವಾರ, ಶುಕ್ರವಾರ ಭೇಟಿ ನೀಡುತ್ತಿದ್ದರು. ಬಳಿಕ ವಾಹನ ವ್ಯವಸ್ಥೆ ಇಲ್ಲದ ಕಾರಣ ಒಮ್ಮೆ ಬಂದಿರುತ್ತಾರೆ.
ಸಹಾಯಕಿಯರಿಂದ ಸೇವೆ
ಇಲ್ಲಿಗೆ ಬರುವ ಮಂದಿಗೆ ಕಿರಿಯ ಆರೋಗ್ಯ ಸಹಾಯಕಿಯವರೆ ಪರೀಕ್ಷಿಸಿ, ಔಷಧಗಳನ್ನು ನೀಡುತ್ತಿ ದ್ದಾರೆ. ಹೆಚ್ಚಿನ ತಪಾಸಣೆ ಬೇಕಿದ್ದಲ್ಲಿ ಇಲ್ಲಿಂದ 12 ಕಿ.ಮೀ. ದೂರದ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಿದೆ. ಪುದುವೆಟ್ಟು, ಬೊಳಿ¾ನಾರ್, ಚಾರ್ಮಾಡಿ, ಗಂಡಿ ಬಾಗಿಲು, ತೋಟತ್ತಾಡಿ, ಚಿಬಿದ್ರೆಗಳಲ್ಲಿರುವ ಉಪಆರೋಗ್ಯ ಕೇಂದ್ರ ಗಳು ನೆರಿಯಾ ಆರೋಗ್ಯ ಕೇಂದ್ರದ ಅಡಿಯಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದು, ಇಲ್ಲಿ ಓರ್ವ ಕಿರಿಯ ಆರೋಗ್ಯ ಸಹಾಯಕಿ ಹಾಗೂ ಒಂದು ಸಾವಿರ ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ವಿಭಜನೆಯಾಗದ ಆ.ಕೇಂದ್ರ
ತೋಟತ್ತಾಡಿ ಗ್ರಾಮಗಳ ವ್ಯಾಪ್ತಿಗೆ ಸಂಬಂಧಪಟ್ಟಂತೆ ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಪ್ರಾ. ಆರೋಗ್ಯ ಕೇಂದ್ರ ತೆರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳಿಂದ ಅದು ಇನ್ನೂ ಕೂಡ ನೆರಿಯ ಪ್ರಾ.ಆ. ಕೇಂದ್ರದಿಂದ ವಿಭಜನೆ ಗೊಂಡಿಲ್ಲ. ಕಕ್ಕಿಂಜೆಯಲ್ಲಿ ಸರಿ ಯಾದ ಕಟ್ಟಡ, ವೈದ್ಯಾಧಿಕಾರಿ, ಸಿಬಂದಿ, ವೈದ್ಯ ಕೀಯ ಸೌಲಭ್ಯ ಇಲ್ಲದ ಕಾರಣ ಅಲ್ಲಿನವರು ನೆರಿಯ ಆರೋಗ್ಯ ಕೇಂದ್ರವನ್ನೇ ಆಶ್ರಯಿಸಬೇಕಿದೆ.
Related Articles
ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಖಾಯಂ ವೈದ್ಯರನ್ನು ನೇಮಿಸುವಂತೆ ನಿರ್ಣಯ ಮಾಡಿ ಶಾಸಕರಿಗೆ ,ತಾಲೂಕು ವೈದ್ಯಾಧಿಕಾರಿಗಳಿಗೆ ಕಳುಹಿಸಲಾಗಿದೆ. ತೀರಾ ಗ್ರಾಮೀಣ ಪ್ರದೇಶವಾದ ಕಾರಣ ಇಲ್ಲಿಗೆ ಬರಲು ವೈದ್ಯರು ಹಿಂದೇಟು ಹಾಕುತ್ತಾರೆ.
– ಪಿ. ಮಹಮ್ಮದ್, ಅಧ್ಯಕ್ಷರು, ಗ್ರಾ.ಪಂ.ನೆರಿಯ
Advertisement
ವೈದ್ಯರ ನಿಯೋಜನೆನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಿರಿಜನ ಸಂಚಾರಿ ಘಟಕದ ವೈದ್ಯರನ್ನು ನಿಯೋ ಜಿಸಲಾಗಿದ್ದು, ತತ್‌ಕ್ಷಣ ದಿಂದ ಕರ್ತವ್ಯಕ್ಕೆ ತೆರಳಲು ಸೂಚಿಸಲಾಗಿದೆ.
– ಡಾ| ಕಲಾಮಧು, ತಾ| ಆರೋಗ್ಯಾಧಿಕಾರಿ, ಬೆಳ್ತಂಗಡಿ