Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19ರ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ, ಕೃಷಿ ಉತ್ಪನ್ನಗಳ ಸರಕು ಸಾಗಣೆ ಚಟುವಟಿಕೆ ಸಂಬಂಧ ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದರು. ಬಿತ್ತನೆ, ನಾಟಿ, ಉಳುಮೆ ಸೇರಿದಂತೆ ಕೃಷಿಚಟುವಟಿಕೆಗಳಿಗೆ ಮುಕ್ತ ವಾತಾವರಣ ಕಲ್ಪಿಸಬೇಕು. ಕೃಷಿ, ತೋಟಗಾರಿಕೆಯಂತಹ ಪೂರಕ ಕಾರ್ಯಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಬೇಕು. ಯಾವುದೇ ನಿರ್ಬಂಧ ಇರಬಾರದೆಂದು ಸಚಿವರು ತಿಳಿಸಿದರು.
ಸಾಮಗ್ರಿಗಳನ್ನು ಮಾರಾಟ ಮಾಡುವವರು ಕೃತಕ ಅಭಾವ ಸೃಷ್ಟಿಸಬಾರದು ಎಂದು ಸೂಚಿಸಿದರು. ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಮಹೇಶ್ ಪ್ರಭು ಮತ್ತಿತರರು ಮಾತನಾಡಿ, ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಎಪಿಎಂಸಿಗಳಲ್ಲಿ ಮಧ್ಯವರ್ತಿಗಳಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ದರ ಸಿಗುತ್ತಿಲ್ಲ. ರೈತರ ನೆರವಿಗೆ ಪೂರಕ ಅನುಕೂಲ ಕಲ್ಪಿಸಬೇಕೆಂದರು. ಹೂ ಬೆಳೆಗಾರರ ಕಷ್ಟದ ಪರಿಸ್ಥಿತಿಯ ಅರಿವು ಸರ್ಕಾರಕ್ಕಿದೆ. ಮುಖ್ಯಮಂತ್ರಿಯವರು ಈಗಾಗಲೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದರು. ಶಾಸಕರಾದ ನರೇಂದ್ರ, ಮಹೇಶ್, ನಿರಂಜನಕುಮಾರ್ ಜಿಪಂ ಅಧ್ಯಕ್ಷ ಮಹೇಶ್, ಜಿಲ್ಲಾಧಿಕಾರಿ ಡಾ. ರವಿ, ಜಿಪಂ ಸಿಇಒ ನಾರಾಯಣರಾವ್, ಎಸ್ಪಿ ಆನಂದಕುಮಾರ್, ಎಡೀಸಿ ಆನಂದ್, ಎಸಿ ನಿಖೀತಾ, ಅಗ್ರಿ ಡಿಡಿ ಚಂದ್ರಕಲಾ, ತೋಟಗಾರಿಕೆ ಇಲಾಖೆ ಡಿಡಿ ಶಿವಪ್ರಸಾದ್ ರೈತ ಮುಖಂಡರಾದ ಡಾ. ಗುರುಪ್ರಸಾದ್ ಇತರರಿದ್ದರು.