Advertisement

ಮೋದಿ-ಟ್ರಂಪ್‌ ಮಾತುಕತೆಯಲ್ಲಿ ಎಚ್‌-1ಬಿ ವೀಸಾ ಚರ್ಚೆ ಆಗಿಲ್ಲ !

12:12 PM Jun 27, 2017 | Team Udayavani |

ವಾಷಿಂಗ್ಟನ್‌ : ಭಾರತ – ಅಮೆರಿಕ ಸಂಬಂಧದಲ್ಲಿ  ತೆರೆಮರೆಯ ಮುಳ್ಳಾಗಿ ನಿಂತಿರುವ ಎಚ್‌-1ಬಿ ವೀಸಾ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಾತುಕತೆಯಲ್ಲಿ  ಚರ್ಚಿಸಲಾಗಿಲ್ಲ ಎಂಬುದು ಗಮನಾರ್ಹವಾಗಿದೆ. 

Advertisement

ಭಾರತೀಯ ಐಟಿ ಕ್ಷೇತ್ರಕ್ಕೆ ಅತ್ಯಗತ್ಯವಾಗಿದ್ದ ಎಚ್‌-1ಬಿ ವೀಸಾಕ್ಕೆ ಅಧ್ಯಕ್ಷ ಟ್ರಂಪ್‌ ಅವರು ಹೇರಿದ್ದ ನಿರ್ಬಂಧಗಳು ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸುವ ತನಕವೂ ಅತ್ಯಂತ ಪ್ರಮುಖ ಚರ್ಚೆಯ ವಿಷಯವಾಗಿದ್ದವು. ಆದರೆ ಟ್ರಂಪ್‌ ಜತೆಗಿನ ಮೋದಿ ಅವರ ಚೊಚ್ಚಲ ಭೇಟಿಯಲ್ಲಿ ಈ ವಿಷಯ ಚರ್ಚೆಗೆ ಬರಲೇ ಇಲ್ಲ. 

ಹಾಗಿದ್ದರೂ ಟ್ರಂಪ್‌ ಆಡಳಿತ ಈ ಮೊದಲೇ ಭಾರತದ ಮಟ್ಟಿಗೆ ತಾನು ಎಚ್‌-1ಬಿ ವೀಸಾ ನಿರ್ಬಂಧಗಳ ಪುನರ್‌ ಪರಿಶೀಲನೆ ಮಾಡುವುದಾಗಿ ಹೇಳಿತ್ತು. 

ಪ್ರಧಾನಿ ಮೋದಿ – ಅಧ್ಯಕ್ಷ ಟ್ರಂಪ್‌ ನಡುವಿನ ಮಾತುಕತೆಯಲ್ಲಿ ಎಚ್‌-1ಬಿ ವೀಸಾ ಚರ್ಚಿಸಲ್ಪಟ್ಟಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜೈಶಂಕರ್‌ ಅವರು “ಉಭಯ ನಾಯಕರ ನಡುವೆ ಅನೇಕ ಪ್ರಮುಖ ವಿಷಯಗಳು ಚರ್ಚಿತವಾಗಿವೆ; ವಿವಿಧ ಉದ್ಯಮಗಳು ಹಾಗೂ ಡಿಜಿಟಲ್‌ ಪಾಲುದಾರಿಕೆಯನ್ನು ಚರ್ಚಿಸಲಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next