Advertisement

BJP-JDS ಮೈತ್ರಿ ಕುರಿತು ನಮ್ಮ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ: ಸಿ.ಟಿ.ರವಿ

06:13 PM Jul 16, 2023 | Team Udayavani |

ಚಿಕ್ಕಮಗಳೂರು: ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರುವುದು ಉಂಟಾ, ನಮ್ಮ ಪ್ರಧಾನಿ ಮೋದಿ ಅನಭಿಷಕ್ತ ರಾಜನಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಜನರ ಹೃದಯದಲ್ಲಿ ಸ್ಥಾನ ಪಡೆದ ಸಾಮ್ರಾಟ. ನೂರು ನರಿಗಳು ಘೀಳಿಟ್ಟರೂ ಕಾಡಿನ ರಾಜ‌ ಸಿಂಹ ಅದರ ದಾರಿಯಲ್ಲಿ ನಡೆಯುತ್ತೆ ಎಂದು ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ವಿಪಕ್ಷಗಳ ಒಗ್ಗಟ್ಟಿನ ಕುರಿತು ಪ್ರತಿಕ್ರಿಸಿ, ” ನೂರು ವಿಪಕ್ಷ ಗಳಿಗೆ ಭಯ ಇದೆ, ಅದಕ್ಕೆ ಒಂದಾಗಿದ್ದಾರೆ. ಅವರ ಒಗ್ಗಟ್ಟು ದೇಶದ ಹಿತದೃಷ್ಟಿಯಿಂದಲ್ಲ. ಅವರಿಗೆ ಹೆಸರುವ ಅಗತ್ಯವಿಲ್ಲ. ಈಗ ನರಿಗಳ ಸಂಖ್ಯೆ ಕಡಿಮೆಯಾಗಿದೆ, ಅಪರೂಪಕ್ಕೆ ಸಿಗುತ್ತವೆ. ಈಗ ನರಿಗಳ ಸಂಖ್ಯೆ ಕಡಿಮೆಯಾಗಿದೆ, ಮೊದಲು ಮಲೆನಾಡ ಗದ್ದೆ ಬಯಲಲ್ಲಿ ನರಿಗಳು ಇರುತ್ತಿದ್ದವು. ಈಗ ಅಪರೂಪಕ್ಕೆ ಸಿಗುತ್ತವೆ ಎಂದರು.

ಮೈತ್ರಿ ಕುರಿತು ಯಾವುದೇ ಚರ್ಚೆ ಆಗಿಲ್ಲ
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಡಾ ಕುರಿತು ಪ್ರತಿಕ್ರಿಯಿಸಿ, ನೇಷನ್ ಫಸ್ಟ್, ಪಾರ್ಟಿ ನೆಕ್ಸ್ಟ್, ಪರ್ಸನ್ ಲಾಸ್ಟ್ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು. ನೇಷನ್ ಫಸ್ಟ್ ಎಂಬ ತತ್ವದ ಮೇಲೆ ಯಾರು ಬೇಕಾದರೂ ನಮ್ಮ ಜತೆ ಬರಬಹುದು. ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ರಾಜಕಾರಣದಲ್ಲಿ ಶಾಶ್ವತ ಶತ್ರುಗಳು ಇಲ್ಲ, ಮಿತ್ರರೂ ಇಲ್ಲ. ರಾಷ್ಟ್ರದ ಹಿತಾಸಕ್ತಿ, ಮೋದಿ ನೇತೃತ್ವದ ರಾಷ್ಟ್ರ ಹಿತ ಹಾಗೂ ಜನಪರ ಕೆಲಸ ಮೆಚ್ಚಿ ಯಾರು ಬೇಕಾದರೂ ಬರಬಹುದು. ಎನ್ ಡಿಎ ಹಾಗೂ ಬಿಜೆಪಿ ಜತೆ ಯಾರು ಬೇಕಾದರೂ ಬರಬಹುದು. ಜೆಡಿಎಸ್ ಜತೆ ಮೈತ್ರಿ ಕುರಿತಂತೆ ನಮ್ಮ ಹಂತದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರನ್ನೂ ದೂರ ಇಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರಲ್ಲ” ಎಂದರು.

ಕದ್ದವರು ಯಾರು?
ವಿಪಕ್ಷ ನಾಯಕನ ಆಯ್ಕೆಯಾಗದಿರುವುದು ಕಾಂಗ್ರೆಸಿಗರಿಗೆ ಈಗ ಆರಾಮಾಯ್ತಲ್ಲ, ಈಗ ಅವರಿಗೇಕೆ ಭಯ?, ವಿಪಕ್ಷ ನಾಯಕ ಇದ್ದಿದ್ದರೆ ಅರ್ಕಾವತಿ ಪ್ರಕರಣವನ್ನ ಹೊರ ತೆಗೆಯುತ್ತಿದ್ದರು. ಈಗ ಕಾಂಗ್ರೆಸ್ಸಿಗರು ನಿಶ್ಚಿಂತೆಯಾಗಿ ಇರಬಹುದಲ್ಲ. ಅರ್ಕಾವತಿ ಖದೀಮರು ಯಾರು ಎಂದರೆ ತಡಬಡಿಸಬೇಕಿತ್ತು. ನಾನು ಹತ್ತಾರು ಬಾರಿ ಕೇಳಿದ್ದೇನೆ ಈವರೆಗೂ ಉತ್ತರ ಕೊಟ್ಟಿಲ್ಲ. ಅರ್ಕಾವತಿ ಹಗರಣದಲ್ಲಿ ಇದ್ದ ಮೂವರಲ್ಲಿ ಕದ್ದವರು ಯಾರು?, 8000 ಕೋಟಿ ಲೂಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ. ಉತ್ತರ ಕೊಡುವ ಧೈರ್ಯವೂ ಅವರಿಗಿಲ್ಲ.ಯಾಕಂದರೆ , ಇದ್ದವರು ಅವರೇ ಕದ್ದವರು ಅವರೇ” ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ವಿಪಕ್ಷ ನಾಯಕ ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿ, ”ರಾಜಕಾರಣದಲ್ಲಿ ಇವನ್ನೆಲ್ಲಾ ಸುಮ್ಮನೆ ಬಿಟ್ಟಿರೋದಿಲ್ಲ. ಅದಕ್ಕೆಲ್ಲಾ ಕಾರಣ ಇರುತ್ತದೆ, ಈಗ ಅದರ ವಿಶ್ಲೇಷಣೆ ಬೇಡ ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next