Advertisement

ಏಶ್ಯನ್‌ ಗೇಮ್ಸ್‌ ಆರ್ಚರಿ: ದೀಪಿಕಾ ಇಲ್ಲದ ವನಿತಾ ತಂಡ ಆಯ್ಕೆ

10:56 PM Mar 28, 2022 | Team Udayavani |

ಸೋನಿಪಟ್‌: ವಿಶ್ವದ ಎರಡನೇ ರ್‍ಯಾಂಕಿನ ದೀಪಿಕಾ ಕುಮಾರಿ ಅವರು ಮುಂಬರುವ ಏಶ್ಯನ್‌ ಗೇಮ್ಸ್‌ಗಾಗಿ ಆಯ್ಕೆ ಮಾಡಲಾದ ಭಾರತೀಯ ಆರ್ಚರಿ ತಂಡದಲ್ಲಿ ಸ್ಥಾನ ಪಡೆಯಲು ವಿಫ‌ಲರಾಗಿದ್ದಾರೆ. ಇದು ಅವರ ಮಹೋನ್ನತ ಕ್ರೀಡಾಬಾಳ್ವೆಯಲ್ಲಿ ಆಗಿರುವ ಬಲುದೊಡ್ಡ ಹೊಡೆತವಾಗಿದೆ.

Advertisement

ಸಾಯ್‌ ಸೆಂಟರ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನ ಮೂರು ರೌಂಡ್‌ ರಾಬಿನ್‌ ಪಂದ್ಯಗಳಲ್ಲಿ ದೀಪಿಕಾ ಎರಡರಲ್ಲಿ ಸೋಲುವ ಮೂಲಕ ಏಶ್ಯನ್‌ ಗೇಮ್ಸ್‌ ತಂಡಕ್ಕೆ ಆಯ್ಕೆಯಾಗಲು ವಿಫ‌ಲರಾದರು.

2010ರ ಬಳಿಕ ಅವರು ಇದೇ ಮೊದಲ ಬಾರಿಗೆ ಏಶ್ಯನ್‌ ಗೇಮ್ಸ್‌ಗೆ ಆಯ್ಕೆಯಾಗಿಲ್ಲ. ಅಗ್ರ ಎಂಟು ಆಟಗಾರರನ್ನು ಆಯ್ಕೆ ಮಾಡಲು ಶನಿವಾರ ನಡೆದ ಎರಡು ಹಂತಗಳ ಎಲಿಮಿನೇಶನ್‌ ಸುತ್ತಿನಲ್ಲಿ ದೀಪಿಕಾ ಆಯ್ಕೆಯಾಗಲು ವಿಫ‌ಲರಾಗಿದ್ದರು.ಹಾಗಾಗಿ ಅವರು ರೌಂಡ್‌ ರಾಬಿನ್‌ ಸುತ್ತಿನಲ್ಲಿ ಹೋರಾಡಬೇಕಾಯಿತು.

2010ರಲ್ಲಿ ನಡೆದ ದಿಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ದೀಪಿಕಾ ಆಬಳಿಕ ಇದೇ ಮೊದಲ ಬಾರಿ ಬೃಹತ್‌ ಕೂಟ ದಲ್ಲಿ ಆಯ್ಕೆಯಾಗಲು ವಿಫ‌ಲರಾಗಿದ್ದಾರೆ. ಏಶ್ಯನ್‌ ಗೇಮ್ಸ್‌ ಸೆಪ್ಟಂಬರ್‌ 10ರಿಂದ 25ರ ವರೆಗೆ ಹ್ಯಾಂಗ್‌ಝುನಲ್ಲ ನಡೆಯಲಿದೆ.

2010, 2014 ಮತ್ತು 2018ರ ಏಶ್ಯನ್‌ ಗೇಮ್ಸ್‌ನಲ್ಲಿ 27ರ ಹರೆಯದ ದೀಪಿಕಾ ದೇಶವನ್ನು ಪ್ರತಿನಿಧಿಸಿದ್ದರು. ಗ್ವಾಂಗ್‌ಝುನಲ್ಲಿ 12 ವರ್ಷಗಳ ಹಿಂದೆ ನಡೆದ ಗೇಮ್ಸ್‌ ನಲ್ಲಿ ತಂಡ ಸ್ಪರ್ಧೆಯಲ್ಲಿ ಭಾರತ ಕಂಚು ಜಯಿಸಿತ್ತು.

Advertisement

ವಿಶ್ವಕಪ್‌ನಲ್ಲಿ ಅಮೋಘ ಸಾಧನೆ: 2009ರ ಬಳಿಕ ತನ್ನ ಕ್ರೀಡಾ ಬಾಳ್ವೆಯಲ್ಲಿ ದೀಪಿಕಾ ವಿಶ್ವಕಪ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಅಸಮರ್ಥರಾಗಿದ್ದಾರೆ.

ವಿಶ್ವಕಪ್‌ನಲ್ಲಿ ಅವರು 11 ಚಿನ್ನದ ಪದಕ ಸಹಿತ 12 ಬೆಳ್ಳಿ ಮತ್ತು 7 ಕಂಚಿನ ಪದಕ ಗೆದ್ದಿದ್ದಾರೆ. ವಿಶ್ವಕಪ್‌ ಫೈನಲ್‌ನಲ್ಲಿ ದಾಖಲೆ ನಾಲ್ಕು ಬಾರಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಬೆಳ್ಳಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next