Advertisement

“Deep Fake ಗೆ ಅವಕಾಶ ಇಲ್ಲ”- ನಿರ್ದೇಶಕ ಇಶಾನ್‌ ಜಾನ್‌ ಚಟರ್ಜಿ

12:23 AM Dec 02, 2023 | Team Udayavani |

ಹೊಸದಿಲ್ಲಿ: ಡೀಪ್‌ಫೇಕ್‌ ವೀಡಿಯೋ ಗಳನ್ನು ಪಸರಿಸುವ ಅಥವಾ ಯಾವುದೇ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಪ್ಲಾಟ್‌ಫಾರ್ಮ್ಗಳೊಂದಿಗೆ ಸಂಯೋಜನೆ ಹೊಂದಲು ವೀಡಿಯೋ ಶೇರಿಂಗ್‌ ಕಂಪೆನಿ ಯೂಟ್ಯೂಬ್‌ ಮತ್ತದರ ಸೇವೆಗಳ ಪಾಲುದಾರರು ಬಯಸುವುದಿಲ್ಲ. ಈ ಬಗ್ಗೆ ಮಾತನಾಡಿದ ಯೂಟ್ಯೂಬ್‌ನ ಭಾರತದ ಲ್ಲಿನ ನಿರ್ದೇಶಕ ಇಶಾನ್‌ ಜಾನ್‌ ಚಟರ್ಜಿ, “ನಮ್ಮ ಸಂಸ್ಥೆ ಭಾರತದ ಕಾನೂನು ಪಾಲಿಸಲು ಬದ್ಧವಾಗಿದೆ. ಜತೆಗೆ ಐಟಿ ಕ್ಷೇತ್ರದಲ್ಲಿನ ಇತರರ ಜತೆಗೆ ಕೆಲಸ ಮಾಡುತ್ತೇವೆ ‘ ಎಂದಿದ್ದಾರೆ.

Advertisement

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ, ಆಲಿಯಾ ಭಟ್‌ ಅವರ ಡೀಪ್‌ಫೇಕ್‌ ವೀಡಿಯೋಗಳು ವೈರಲ್‌ ಆಗಿದ್ದವು. ಜಾಲತಾಣಗಳಲ್ಲಿ ವೀಡಿಯೋ ವೈರಲ್‌ ಆಗಿದ್ದರಿಂದ 2022ರ ನೂತನ ಐಟಿ ನಿಯಮಗಳನ್ನು ಜಾಲತಾಣ ಸಂಸ್ಥೆಗಳು ಇನ್ನೂ ಅನುಸರಿಸುತ್ತಲೇ ಇಲ್ಲವೆಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕೆಲವು ದಿನಗಳ ಹಿಂದೆ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next