Advertisement

ವರದಕ್ಷಿಣೆ ಕೇಸ್‌ಗೆ ವ್ಯಾಪ್ತಿಯ ಮಿತಿಯಿಲ್ಲ: ಸುಪ್ರೀಂ ತೀರ್ಪು

01:00 AM Apr 10, 2019 | mahesh |

ಹೊಸದಿಲ್ಲಿ: ಮಹಿಳೆ, ಗಂಡನ ಮನೆಯಿಂದ ಹೊರಬಂದು ಬೇರೆಲ್ಲೇ ಆಶ್ರಯ ಪಡೆದಿದ್ದರೂ ಅಲ್ಲಿಂದಲೇ ಗಂಡನ ಮನೆಯಲ್ಲಿ ತಮ್ಮ ವಿರುದ್ಧದ ವರದಕ್ಷಿಣೆ ಕಿರುಕುಳಗಳ ಬಗ್ಗೆ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪಿತ್ತಿದೆ. ಈ ಮೂಲಕ, ಇದೇ ವಿಚಾರಕ್ಕೆ ಸಂಬಂಧಿಸಿ ರುಪಾಲಿ ದೇವಿ ಎಂಬ ಮಹಿಳೆಯ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ತಳ್ಳಿ ಹಾಕಿದೆ.

Advertisement

ಗಂಡನ ಮನೆಯಿಂದ ತವರು ಮನೆಗೆ ಹಿಂದಿರುಗಿದ್ದ ರುಪಾಲಿ ದೇವಿ, ಗಂಡನ ಮನೆಯವರ ವಿರುದ್ಧ ಕಿರು ಕುಳದ ಕೇಸು ದಾಖಲಿಸಿದ್ದರು. ಆದರೆ, ಅದನ್ನು ಆಕ್ಷೇಪಿಸಿದ್ದ ಹೈಕೋರ್ಟ್‌, ಗಂಡನ ಮನೆ ಅಥವಾ ಅತ್ತೆ/ಮಾವನ ಮನೆ ಯಾವ ನ್ಯಾಯಾಂಗ ಪರಿಧಿಗೆ ಒಳಪಡುತ್ತದೋ ಆ ಪರಿಧಿಯನ್ನು ಬಿಟ್ಟು ಬೇರೆಡೆಯಿಂದ ಕೇಸು ದಾಖಲಿಸಿದರೆ ಅಂಥ ಕೇಸುಗಳ ತನಿಖೆ ಮಾಡುವುದಾಗಲೀ ಅಥವಾ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡುವುದಾಗಲಿ ಸಲ್ಲದು ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next