Advertisement

Minister HKP: ವೇತನ ಪರಿಷ್ಕರಣೆ ಬಗ್ಗೆ ಯಾವುದೇ ತೀರ್ಮಾನವಿಲ್ಲ; ಸಚಿವ ಎಚ್‌ಕೆಪಿ

08:47 PM Jun 13, 2024 | Suhan S |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ ವೇತನ ಪರಿಷ್ಕರಣೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ, ಈ ನಿಟ್ಟಿನಲ್ಲಿ ಯಾವುದೇ ತೀರ್ಮಾನ ಆಗಿಲ್ಲ.

Advertisement

7ನೇ ವೇತನ ಆಯೋಗ ವರದಿಯ ಶಿಫಾರಸುಗಳ ಜಾರಿ, ಅದರಿಂದಾಗಬಹುದಾದ ಆರ್ಥಿಕ ಹೊರೆ ಸೇರಿದಂತೆ ಇದಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಆದರೆ, ಅಧಿಕೃತ ಪ್ರಸ್ತಾವನೆ ಬಾರದ ಹಿನ್ನೆಲೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ವೇತನ ಪರಿಷ್ಕರಣೆ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಲಿದೆ ಎಂಬ ನಿರೀಕ್ಷೆ ಇತ್ತು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಸರ್ಕಾರಿ ನೌಕರರು ಸಚಿವ ಸಂಪುಟ ಸಭೆಯ ಎದುರುನೋಡುತ್ತಿದ್ದರು. ಆದರೆ, ನಿರೀಕ್ಷೆಗಳು ತಾತ್ಕಾಲಿಕವಾಗಿ ಹುಸಿಯಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next