Advertisement

ಸೊಂಪುರ ಗೊಲ್ಲರಹಟ್ಟಿಗೆ ವರ್ಷದಿಂದ ಕರೆಂಟ್‌ ಇಲ್ಲ!

05:44 PM Jun 05, 2022 | Team Udayavani |

ಮುದಗಲ್ಲ: ತಲೇಖಾನ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸೊಂಪುರ ಗೊಲ್ಲರಹಟ್ಟಿಯ ಜನರು ಸುಮಾರು ಒಂದು ವರ್ಷದಿಂದ ಕತ್ತಲಲ್ಲಿಯೇ ಕಾಲ ಕಳೆಯುವುದರ ಜತೆಗೆ ನೀರಿಗೂ ಹಾಹಾಕಾರ ಅನುಭವಿಸುವಂತಾಗಿದೆ.

Advertisement

ಇನ್ನು ಈ ಗ್ರಾಮದಲ್ಲಿ ಸರಿಯಾದ ರಸ್ತೆ, ಶಿಕ್ಷಣ ಸೌಲಭ್ಯವಿಲ್ಲದ ಕಾರಣ ಇಲ್ಲಿನ ಜನರು ಆದಿವಾಸಿಗಳಂತೆ ಬದುಕು ನಡೆಸುತ್ತಿದ್ದಾರೆ. ಹೆಚ್ಚಾಗಿ ಕುರಿ, ದನಗಾಯಿಗಳು ವಾಸಿಸುವ ಈ ಪ್ರದೇಶದಲ್ಲಿ ಸುಮಾರು ದಿನಗಳಿಂದ ನಿರಂತರ ಜ್ಯೋತಿ ಯೋಜನೆಯಿಂದ ವಂಚಿತವಾಗಿರುವ ಹಟ್ಟಿಗೆ 2013-14ನೇ ಸಾಲಿನ ಜಿಪಂನ ಸುಮಾರು 10 ಲಕ್ಷ ರೂ. ಅನುದಾನದಲ್ಲಿ ಗುತ್ತಿಗೆದಾರರು ಕೊಳವೆ ಬಾವಿ ಕೊರೆಸಿ ವಿದ್ಯುತ್‌ ಪರಿವರ್ತಕ ಅಳವಡಿಸುವ ಮೂಲಕ ಕಿರುನೀರು ಸರಬರಾಜು ಯೋಜನೆ ನೀಡಿತ್ತು. ಆದರೆ, 2021-22ರಲ್ಲಿ ನಿರಂತರ ಜ್ಯೋತಿ ಯೋಜನೆಯಿಂದ ಹೊರಗುಳಿದ ಗೊಲ್ಲರಹಟ್ಟಿಯ ಕುಟುಂಬಗಳು ರಾತ್ರಿಯಲ್ಲಿ ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲದೆ ಪರಿತಪ್ಪಿಸಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ

ನಿತ್ಯದ ಕೆಲಸಕ್ಕೂ ವಿದ್ಯುತ್‌ ಇಲ್ಲದೆ ಮಹಿಳೆಯರು, ಮಕ್ಕಳು, ವಯೋವೃದ್ಧರು ಸಂಜೆ 7 ಗಂಟೆಯಾದರೆ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರು, ಹಬ್ಬ-ಹರಿದಿನ, ಜಾತ್ರೆ, ಮದುವೆಗಳಂತಹ ಕಾರ್ಯಗಳಿಗೆ ಜನರೇಟರ್‌ ಅವಲಂಬಿಸಬೇಕಾದ ಪರಿಸ್ಥಿತಿದೆ. ರಾತ್ರಿ ವೇಳೆ ಹಾವು, ಚೇಳು ಸೇರಿದಂತೆ ವಿಷ ಜಂತುಗಳ ಕಾಟ ಒಂದಡೆಯಾದರೆ, ಕಾಡು ಪ್ರಾಣಿಗಳಾದ ಕರಡಿ, ತೋಳ, ಚಿರತೆ, ಕಾಡು ಹಂದಿಗಳ ಭಯದಲ್ಲಿ ಬದುಕು ಸಾಗಿಸಬೇಕಿದೆ ಎಂದು ಗ್ರಾಮದ ದುರುಗಪ್ಪ, ಯಂಕಪ್ಪ, ಛತ್ರಪ್ಪ, ಈರಪ್ಪ ಆರೋಪಿಸಿದ್ದಾರೆ.

ತೋಟದ ಮನೆ ಯೋಜನೆಯಡಿ ಗೊಲ್ಲರ ಸಮುದಾಯದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. -ರಾಜಶೇಖರ ಫಗಡದಿನ್ನಿ, ಇಇ ಜೆಸ್ಕಾಂ ವಿಭಾಗ ಸಿಂಧನೂರ

Advertisement

ಕ್ಷೇತ್ರದಲ್ಲಿ ವಿದ್ಯುತ್‌ ಸಂಪರ್ಕ ರಹಿತ ಮನೆಗಳ ಸಮೀಕ್ಷೆ ನಡೆಸಿ ಬೆಳಕು ಯೋಜನೆಯಡಿ ವಿದ್ಯುತ್‌ ಸಂಪರ್ಕ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. -ಆರ್‌.ಬಸನಗೌಡ ತುರ್ವಿಹಾಳ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next