ಮಂಗಳೂರು : ಶನಿವಾರ ಮೂವರಲ್ಲಿ ಕೋವಿಡ್ ಕಾಣಿಸಿಕೊಂಡು ಆತಂಕಕ್ಕೊಳಗಾದ ದ.ಕ.ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಪಾಸಿಟವ್ ದಾಖಲಾಗದ ಕಾರಣ ಸ್ವಲ್ಪ ನಿರಾಳತೆ ನೆಲೆಸಿದೆ.
ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ 33 ವರ್ಷದ ಮಹಿಳೆ ಕೋವಿಡ್ ಗುಣಮುಖರಾಗಿ ಸೋಮವಾರ ಬಿಡುಗಡೆಗೊಂಡಿದ್ದಾರೆ. ಆಕೆಗೆೆ ಎ. 25ರಂದು ಕೋವಿಡ್ ದೃಢಪಟ್ಟಿತ್ತು.
ಇವರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕಸ್ಬಾದ 67 ವರ್ಷದ ವೃದ್ಧೆಯ ಪುತ್ರಿ. ತಾಯಿಗೆ ಕೋವಿಡ್ ದೃಢಪಟ್ಟ ತತ್‌ಕ್ಷಣವೇ ಪುತ್ರಿಯನ್ನು ಕರೆಸಿ ಗಂಟಲ ದ್ರವ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಲಾಗಿತ್ತು.
ಸೋಮವಾರ ಒಟ್ಟು 124 ಜನರ ಗಂಟಲ ದ್ರವ ಮಾದರಿಯ ವರದಿ ಬಂದಿದ್ದು, ಪಾಸಿಟಿವ್ ಪ್ರಕರಣ ಇಲ್ಲ. ಸೋಮವಾರ 68 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 128 ವರದಿಗಳು ಬರಲು ಬಾಕಿ ಇವೆ. 44 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 351 ಮಂದಿ ಫೀವರ್ ಕ್ಲಿನಿಕ್‌ನಲ್ಲಿ ಪರೀಕ್ಷಿಸಿದ್ದಾರೆ.
ವೃದ್ಧೆಯ ಸ್ಥಿತಿ ಗಂಭೀರ
ಕೋವಿಡ್ ನಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೋಳೂರಿನ 58 ವರ್ಷದ ವೃದ್ಧೆಯ ಸ್ಥಿತಿ ಗಂಭೀರವಾಗಿಯೇ ಇದೆ.