Advertisement
ಆದರೆ ವಿಶೇಷ ಎಂದರೆ ಒಟ್ಟು 18 ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕು ಇಲ್ಲ ಎಂದು ಬಿಬಿಸಿ ವರದಿ ಮಾಡಿದೆ. ಆ ದೇಶಗಳೆಂದರೆ: ಕೊಮೊರೊಸ್, ಕಿರಿಬಾಟಿ, ಲೆಸೊಥೊ, ಮಾರ್ಷಲ್ ದ್ವೀಪಗಳು, ಮೈಕ್ರೋನೇಶಿಯಾ, ನೌರು, ಉತ್ತರ ಕೊರಿಯಾ, ಪಲಾವ್, ಸಮೋವಾ, ಸಾವೊ ಟೋಮ್ ಮತ್ತು ಪ್ರಿನ್ಸಿಪಿ, ಸೊಲೊಮನ್ ದ್ವೀಪಗಳು, ದಕ್ಷಿಣ ಸುಡಾನ್, ತಜಿಕಿಸ್ತಾನ್, ಟೋಂಗಾ, ತುರ್ಕಮೆನಿಸ್ತಾನ್, ತುವಾಲು, ವನವಾಟು ಮತ್ತು ಯೆಮೆನ್.
ಅರಬ್ ಲೀಗ್‌ನ ಪೂರ್ಣ ಪ್ರಮಾಣದ ಸದಸ್ಯರಾದ ಹಿಂದೂ ಮಹಾಸಾಗರದ ಪುಟ್ಟ ದ್ವೀಪ ರಾಷ್ಟ್ರವಾದ ಕೊಮೊರೊಸ್ ಕೋವಿಡ್-19 ದಾಳಿಗೆ ಸಿಲುಕದ ಅರಬ್ ಒಕ್ಕೂಟದ ಕೇವಲ ಎರಡು ರಾಷ್ಟ್ರಗಳ ಪೈಕಿ ಮೊದಲನೆಯದು. ಇನ್ನೊಂದು ಯುದ್ಧ ಪೀಡಿತ ಯೆಮೆನ್. ದಕ್ಷಿಣ ಭಾಗದಲ್ಲಿರುವ ಕೊಮೊರೊಸ್‌ನಲ್ಲಿ ಒಂದೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಉತ್ತರ ಕೊರಿಯಾ, ತಜಿಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ನಲ್ಲೂ ಕೊರೊನಾ ಇಲ್ಲ. ಹೊರಗಿನ ಪ್ರಪಂಚಕ್ಕೆ ಅವರ ಸಂಪರ್ಕ ಸೀಮಿತವಾಗಿದೆ. ಅದೂ COVID 19 ಅನುಪಸ್ಥಿತಿಗೆ ಕಾರಣವಾಗಿರಬಹುದು. ದ್ವೀಪಗಳೇ ಹೆಚ್ಚು
ಲೆಸೊಥೊ, ದಕ್ಷಿಣ ಸುಡಾನ್, ಮತ್ತು ಸಾವೊ ಟೋಮ್ ಮತ್ತು ಪ್ರಿನ್ಸಿಪಿ ಸಹ ಕೊರೊನಾದಿಂದ ಮುಕ್ತ. ಮುಖ್ಯವಾಗಿ ಅಲ್ಲಿಗೆ ತೆರಳುವವರು ತುಂಬಾ ಕಡಿಮೆ. ಕಿರಿಬಾಟಿ, ಮಾರ್ಷಲ್ ದ್ವೀಪಗಳು, ಮೈಕ್ರೋನೇಶಿಯಾ, ನೌರು, ಪಲಾವ್; ಸೊಲೊಮನ್ ದ್ವೀಪಗಳು, ತುವಾಲು, ಟೋಂಗಾ ಮತ್ತು ವನವಾಟು ದೂರದಿಂದ ಕೂಡಿದ್ದು, ಸಾಗರಗಳ ಮಧ್ಯಲ್ಲಿವೆ. ಜತೆಗೆ ಅಲ್ಲಿಗೆ ಪ್ರಯಾಣಿಸುವುದು ದುಬಾರಿಯೂ ಹೌದು.