Advertisement

ಗಲಭೆಕೋರರ ಆಸ್ತಿ ಜಪ್ತಿಗೆ ಕಾಯ್ದೆ ಇಲ್ಲ: ಮಾಧುಸ್ವಾಮಿ

10:03 AM Dec 29, 2019 | mahesh |

ಉಡುಪಿ: ಗಲಭೆಕೋರರ ಆಸ್ತಿ ಜಪ್ತಿ ಮಾಡುವ ಕಾಯ್ದೆ ಇಲ್ಲ. ಆದರೆ ಸಾರ್ವಜನಿಕರ ಆಸ್ತಿ ನಷ್ಟ 2 ಎ ಕಾಯ್ದೆ ಯಡಿ ಶಿಕ್ಷೆ ಮತ್ತು ದಂಡನೆಗೆ ಅವಕಾಶವಿದೆ ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಉತ್ತರ ಪ್ರದೇಶದ ಮಾದರಿಯಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವ ಗಲಭೆಕೋರರ ಆಸ್ತಿ ಜಪ್ತಿ ಕಾನೂನು ರಾಜ್ಯದಲ್ಲಿ ಜಾರಿಯಾದರೆ ಕ್ರಮ ಕೈಗೊಳ್ಳಲು ಸಾಧ್ಯ. ಆದರೆ ಪ್ರಸ್ತುತ ಸರಕಾರ ಈ ಕುರಿತು ತೀರ್ಮಾನ ಕೈಗೊಂಡಿಲ್ಲ. ಹಿಂದೆ ಎಫ್ಐಆರ್‌ ದಾಖಲಾದರೆ ಮಾತ್ರ ಸಾರ್ವಜನಿಕರ ಆಸ್ತಿ ನಷ್ಟ 2 ಎ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿತ್ತು ಎಂದರು.

ಹೊರಗುತ್ತಿಗೆ-ಪಿಪಿ ನೇಮಕ
ರಾಜ್ಯದ ಕೋರ್ಟ್‌ಗಳಲ್ಲಿ ಸರಕಾರಿ ಅಭಿಯೋಜಕರ (ಪಿಪಿ) ಕೊರತೆ ಇದ್ದು, ಆಯಾ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ವಕೀಲರನ್ನು ಹೊರಗುತ್ತಿಗೆಯ ಆಧಾರದಲ್ಲಿ ನೇಮಕ ಮಾಡಿ ಕೋರ್ಟ್‌ ಕಲಾಪ ಶೀಘ್ರ ಮುಗಿಸುವಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

180 ಕೋ.ರೂ. ಕಾಮಗಾರಿ
ಜಿಲ್ಲೆಯಲ್ಲಿ 180 ಕೋ.ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ನದಿ ನೀರನ್ನು ಕಿಂಡಿ ಅಣೆಕಟ್ಟು
ಗಳಲ್ಲಿ ಸಂಗ್ರಹಿಸಿ ಕುಡಿಯುವ ನೀರಿನ ಸಂರಕ್ಷಣೆ ಮತ್ತು ಕೃಷಿಗೆ ಬಳಕೆಗೆ ಅಗತ್ಯವಿರುವ ಯೋಜನೆ ಹಾಕಲಾಗಿದೆ. ಪಶ್ಚಿಮ ವಾಹಿನಿ ಯೋಜನೆಯಡಿ ಕರಾವಳಿಯಲ್ಲಿ ಒಟ್ಟು 1,394 ಕೋ.ರೂ. ವೆಚ್ಚದ 759 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಭಾರೀ ಬೇಡಿಕೆಯಿದ್ದು, ಡಿಪಿಆರ್‌ಗೆ ಆದೇಶ ನೀಡಲಾಗಿದೆ ಎಂದರು.

ಒಬ್ಬರಿಗೆ 5 ಕಾಮಗಾರಿ!
ಸಣ್ಣ ನೀರಾವರಿ ಇಲಾಖೆಯಲ್ಲಿ ಅವ್ಯವಹಾರವಾಗಿಲ್ಲ. ಆದರೆ ಕರಾವಳಿಯಲ್ಲಿ ಕೆಲವು ಗುತ್ತಿಗೆದಾರರು ಪ್ಯಾಕೇಜ್‌ ಮೂಲಕ 15ರಿಂದ 20 ಕಾಮಗಾರಿಗಳನ್ನು ಪಡೆದು, ನಿಗದಿತ ಸಮಯ ದೊಳಗೆ ಕೆಲಸ ಪೂರ್ಣ ಮಾಡುತ್ತಿಲ್ಲ. ಅಂತಹವರನ್ನು ಗುರುತಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡಿರುವ ಅರ್ಹತೆಯ ಜತೆಗೆ ಪ್ರಸ್ತುತ ಹೊಂದಿರುವ ಕಾಮಗಾರಿಗಳ ಪ್ರಮಾಣಪತ್ರ ಪಡೆದ ಬಳಿಕವಷ್ಟೇ ಗುತ್ತಿಗೆ ನೀಡಲಾಗುತ್ತದೆ. ಒಬ್ಬರಿಗೆ ಕೇವಲ 5 ಗುತ್ತಿಗೆ ನೀಡಬಹುದಾದ ನಿಮಯ ಜಾರಿಗೊಳಿಸುವ ಚಿಂತನೆ ಇದೆ ಎಂದರು.

Advertisement

ಎತ್ತಿನಹೊಳೆ ತನಿಖೆಗೆ ಆಗ್ರಹ
ಎತ್ತಿನಹೊಳೆಯಲ್ಲಿ ಪರ್ಯಾಯ ಭೂಮಿ ವಿತರಣೆ ಯಲ್ಲಿ ಅವ್ಯವಹಾರ ನಡೆದಿರುವ ಕುರಿತು ದೂರು ಇದೆ. ಈ ಕುರಿತು ಆದೇಶ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next