ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಲಾಗಿದೆ. ಅವಿಶ್ವಾಸ ಮಂಡನೆಗೆ ಸಂಖ್ಯೆ ಕೊರತೆ ಕಾರಣಕ್ಕೆ ಸೋಲಾಗಿದೆ.
ನಗರಸಭೆ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅವಿಶ್ವಾಸ ಮಂಡನೆ ವಿಶೇಷ ಸಭೆಯಲ್ಲಿ ಸಂಖ್ಯಾಬಲ ಪ್ರದರ್ಶಿಸಲು ವಿಪಲವಾದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಶುಕ್ರವಾರ ಕರೆದಿದ್ದ ಅವಿಶ್ವಾಸನೆ ಮಂಡನೆಗೆ ಸೋಲಾಯಿತು. ಈ ಹಿನ್ನೆಲೆಯಲ್ಲಿ ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ 2024 ಜುಲೈ ವರೆಗೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಸಭೆಯ ಆರಂಭದಲ್ಲಿ ಅವಿಶ್ವಾಸ ಮಂಡನೆ ಪರ ಇರುವವರು ಕೈ ಎತ್ತುವಂತೆ ಸೂಚಿಸಿದಾಗ ಬಿಜೆಪಿ ಸದಸ್ಯರು ಸಭೆಯಲ್ಲಿ ಮಾತನಾಡುವಂತೆ ಆಗ್ರಹಿಸಿದರು.
ಇದನ್ನೂ ಓದಿ:Prabhu Chavan: ಸಮಯಕ್ಕೆ ಸರಿಯಾಗಿ ಬಾರದ ಕಂದಾಯ ಇಲಾಖೆಯ ಸಿಬ್ಬಂದಿಗಳ ಚಳಿ ಬಿಡಿಸಿದ ಶಾಸಕ
ಈ ವೇಳೆ ಇದು ಅವಿಶ್ವಾಸ ಸಭೆಯಾಗಿರುವುದರಿಂದ ಮೊದಲು ಅವಿಶ್ವಾಸ ಸಂಬಂಧ ಕೈ ಎತ್ತಿ ಎತ್ತುವಂತೆ ಅಧ್ಯಕ್ಷರು ಎರಡು ಬಾರಿ ಅವಕಾಶ ನೀಡಿದರು. ಈ ವೇಳೆ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಗೊಂದಲ ಮುಂದುವರೆಯುತ್ತಿದ್ದಂತೆ ನೀಡಿದ ಗಡುವಿನಲ್ಲಿ ಯಾರು ಕೈ ಎತ್ತಲು ಮುಂದಾಗದಿದ್ದಾಗ ಅವಿಶ್ವಾಸ ನಿರ್ಣಾಯ ಮಂಡನೆ ಸಾಧ್ಯವಾಗಿಲ್ಲವೆಂದು ಸಭೆಯನ್ನು ಬರಖಾಸ್ತು ಗೊಳಿಸಲಾಯಿತು.
ಸಭೆಯ ಬಳಿಕ ಬಿಜೆಪಿ ಸದಸ್ಯರು ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ದ ಘೋಷಣೆ ಆಕ್ರೋಶ ಹೊರ ಹಾಕಿದರು. ನಂತರ ಅಧ್ಯಕ್ಷರ ಕೊಠಡಿ ಎದುರು ಪ್ರತಿಭಟನೆ ನಡೆಸಿದರು.