ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡುತ್ತಿಲ್ಲ, ಒಪ್ಪಂದವೂ ಇಲ್ಲ. ಬಿಜೆಪಿಗೆ ಬಿಜೆಯದ್ದೇ ಮತವಿದೆ. ನಾವು ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೂರನೇ ಅಭ್ಯರ್ಥಿ ಹಾಕಿದ್ದೇವೆ. ಮೊದಲನೆಯವರು ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿ ಆಗಿ ಚಿತ್ರ ನಟ, ವಕ್ತಾರ ಜಗ್ಗೇಶ್, ಮೂರನೇಯದು ಲೆಹರ್ ಸಿಂಗ್. ನಾವು ಗೆಲ್ಲುತ್ತೇವೆ ಎಂದರು
ಜೆಡಿಎಸ್ ಜೊತೆ ಮಾತುಕತೆ ಮಾಡಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಟೀಲ್, ‘ಯಾರ ಜೊತೆ ಕೂಡ ಹೊಂದಾಣಿಕೆ ಇಲ್ಲ’ ಎಂದರು.
ಇದನ್ನೂ ಓದಿ:ಯಾರಿಗೆ ಬೇಕು ಎಷ್ಟು ವೋಟು: ರಾಜ್ಯಸಭಾ ಚುನಾವಣೆಗೆ ಮತ ಲೆಕ್ಕಾಚಾರ ಹೇಗಿದೆ?
Related Articles
ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ನಲ್ಲಿ ನನಗ ಸ್ನೇಹಿತರಿದ್ದಾರೆ. ಅವರು ನನಗೆ ಬೆಂಬಲ ನೀಡುವ ವಿಶ್ವಾಸವಿದೆ. ಅವ ಬೆಂಬಲದೊಂದಿಗೆ ನಾನು ಆಯ್ಕೆ ಆಗುತ್ತೇನೆ. ನನ್ನನ್ನು ಮೂರನೇ ಅಭ್ಯರ್ಥಿ ಮಾಡಿದ್ದಕ್ಕೆ ಬೇಸರವಿಲ್ಲ. ನಾನೇ ಮೂರನೇ ಅಭ್ಯರ್ಥಿ ಮಾಡಿ ಎಂದು ಕೇಳಿದ್ದೆ. ಅದರಂತೆ ಈಗ ನನ್ನನ್ನು ಪಕ್ಷ ಮೂರನೇ ಅಭ್ಯರ್ಥಿ ಯನ್ನಾಗಿ ಪಕ್ಷ ಕಣಕ್ಕಿಳಿಸಿದೆ ಎಂದರು.
ಯಾವುದೇ ಕಾರಣಕ್ಕೂ ನಾನು ನಾಮಪತ್ರ ವಾಪಸ್ಸು ಪಡೆಯುವುದಿಲ್ಲ. ಮಧ್ಯಾಹ್ನ 12.30ಕ್ಕೆ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ರಾಜ್ಯದಿಂದ ನಾನು ರಾಜ್ಯಸಭೆಗೆ ಹೋಗಿಯೇ ಹೋಗುತ್ತೇನೆ ಎಂದು ಲೆಹರ್ ಸಿಂಗ್ ಹೇಳಿದರು.
ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಮಪತ್ರ ಸಲ್ಲಿಕೆ ಮಾಡಿದರು. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಜರಿದ್ದರು.
– BJP KARNATAKA (@BJP4Karnataka) 31 May 2022