Advertisement
ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾದ “ಪೊಲೀಸ್‌ಧ್ವಜ ದಿನಾಚರಣೆ’ ಮತ್ತು “ಕಲ್ಯಾಣ ದಿನಾ ಚರಣೆ’ಯಲ್ಲಿ ಅವರು ಮಾತನಾಡಿದರು.
Related Articles
ಸಿಬಂದಿ ತಮ್ಮ ಕುಟುಂಬದೊಂದಿಗೆ ರಜಾಕಾಲವನ್ನು ಕಳೆಯುವುದಾದರೆ ರಜೆ ಅರ್ಜಿಗಳಲ್ಲಿ ಸ್ಪಷ್ಟವಾಗಿ ತಿಳಿಸಿ. ತುರ್ತು ಸಂದರ್ಭ ಹೊರತು ಅಂಗೀಕರಿಸಲಾಗು ತ್ತದೆ. ಸಿಬಂದಿ ವರ್ಷದಲ್ಲಿ ಎರಡು ಬಾರಿ ಯಾದರೂ ತಮ್ಮ ಕುಟುಂಬದೊಂದಿಗೆ ರಜಾಕಾಲವನ್ನು ಕಳೆಯಬೇಕು ಎಂದು ಡಾ| ಬೋರಲಿಂಗಯ್ಯ ಹೇಳಿದರು.
Advertisement
ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಪೊಲೀಸ್ ಮೈದಾನದಲ್ಲಿ (ಚಂದು ಮೈದಾನ) ಪೊಲೀಸ್ ಧ್ವಜ ದಿನ ಆಚರಿಸಲಾಯಿತು.
ನಿವೃತ್ತ ಪೊಲೀಸ್ ನಿರೀಕ್ಷಕ ಸೋಮಪ್ಪ ನಾಯ್ಕ ಅವರು ಅತಿಥಿಯಾಗಿ ಪಾಲ್ಗೊಂಡು ಪೊಲೀಸ್ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ, ಎಲ್ಲ ಸರಕಾರಿ ನೌಕರರು ತಮ್ಮ ಕರ್ತವ್ಯವನ್ನು ನಿತ್ಯ ನಿರ್ದಿಷ್ಟ ಸಮಯದವರೆಗೆ ಮಾತ್ರ ಮಾಡಿ ಕಚೇರಿಗೆ ಬೀಗ ಹಾಕುತ್ತಾರೆ. ಆದರೆ ಪೊಲೀಸ್ ಠಾಣೆಗಳು ಯಾವಾಗಲೂ ತೆರೆದಿರುತ್ತದೆ. ಜನರ ಸಂಕಷ್ಟಗಳಿಗೆ ಸ್ಪಂದಿಸುವ, ಕಾನೂನು ಸುವ್ಯವಸ್ಥೆ ಕಾಪಾಡುವ ಮಹತ್ತರ ಹೊಣೆ ನಮ್ಮದು. ಪೊಲೀಸ್ ಇಲಾಖೆ, ಅಧಿಕಾರಿ ಸಿಬಂದಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿರಿಸಿ ಕರ್ತವ್ಯಕ್ಕಾಗಿ ಜೀವನ ಮುಡಿಪಾಗಿಡುತ್ತಾರೆ ಎಂದರು.
ಕರಾವಳಿ ಕಾವಲು ಪಡೆ ಅಧೀಕ್ಷಕ ಮಿಥುನ್ ಎಚ್.ಎನ್.ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಪೊಲೀಸರಿಗೆ, ಇಲಾಖೆಗೆ ನೀಡುವ ಗೌರವ. ಈ ಧ್ವಜ ಮಾರಾಟದಿಂದ ಬಂದ ಹಣವನ್ನು ಉದಾತ್ತ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದರು. ಅತಿಥಿಗಳು ಪೊಲೀಸ್ ಧ್ವಜ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದರು. ಪೊಲೀಸ್ ಕಲ್ಯಾಣ ನಿಧಿಗೆ ಕೊಡುಗೆಯನ್ನು ಸಂಗ್ರಹಿಸಲಾಯಿತು. ಈ ನಿಧಿಯ ಫಲಾನುಭವಿಗಳಿಗೆ ವಿತ್ತೀಯ ಸವಲತ್ತು ವಿತರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಅರುಣ್ ಕೆ. ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಸಿದ್ದಲಿಂಗಪ್ಪ ವಂದಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಎಪಿಸಿ ಯೋಗೀಶ್ ನಾಯ್ಕ ನಿರೂಪಿಸಿದರು.