Advertisement
ಪಾಲರ್ ನದಿಯಲ್ಲಿನ ಗಿಡ ಮರ ಸ್ವಚ್ಛಗೊಳಿಸಲಾಗಿದೆ ಆದ್ರೂ ಕೆರೆಗಳಲ್ಲಿ ಹಾಗೆ ಬಿಡಲಾಗಿದೆ. ಕೆರೆಯಲ್ಲಿನ ಗಡಿ ಗಂಟಿ ತೆರವು ಮಾಡುವ ಸಂಬಂಧ ನಗರದ ಮಿನಿವಿಧಾನಸೌಧದಲ್ಲಿ 2019, ಜ.10ರಂದು ಜಿಲ್ಲಾಡಳಿತ, ತಾಲೂಕು ಆಡಳಿತ, ಅರಣ್ಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯನ್ನು ಅಂದಿನ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ಎಚ್.ನಾಗೇಶ್ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಭೆ ನಡೆಸಿದ್ದರು.
Related Articles
Advertisement
ಕ್ಲಸ್ಟರ್ ಎರಡು: ಅದೇ ರೀತಿ ಕ್ಲಸ್ಟರ್ ಎರಡರ ಮೂಲಕ ಕೆಂಗುಂಟೆ ಕೆರೆ, ಸೋಮೇಶ್ವರಪಾಳ್ಯ ಕೆರೆ, ಇಂಡ್ಲು ಕೆರೆ, ಸೊನ್ನ ವಾಡಿ ದೊಡ್ಡಕೆರೆ, ಕವತನಹಳ್ಳಿ ದೊಡ್ಡ ಕೆರೆ, ಗುಮ್ಲಾಪುರ ಪಟೇಲ್ ಕೆರೆ, ಮೇಲಾಗಾಣಿ ದೊಡ್ಡ ಕೆರೆ, ಕನ್ನಸಂದ್ರ ದೊಡ್ಡ ಕೆರೆ, ತಾಯಲೂರು ಅಮಾನಿಕೆರೆ, ಮದ್ದೇರಿ ದೊಡ್ಡ ಕೆರೆ, ಕ್ಲಸ್ಟರ್ 3ರ ಮೂಲಕ ಕದರೀ ಪುರ ಗೋಪಣ್ಣ ಕೆರೆ, ಲಿಂಗಾಪುರ ದೊಡ್ಡ ಕೆರೆ, ದೊಡ್ಡಯ್ಯನ ಕೆರೆ, ಉಪ್ಪು ಕೆರೆ, ಸಿದ್ದ ಘಟ್ಟಹೊಸಕೆರೆ, ಮೇಡಿಗಪಲ್ಲಿಕೆರೆ, ಸಿದ್ದಘಟ್ಟವಡ್ಡು ಕೆರೆ, ಮಾರಂಡ ಹಳ್ಳಿ ಕೆರೆ, ಕಪ್ಪಲಮಡಗು ವಡ್ಡು ಕೆರೆ, ಮರಹೇರು ದೊಡ್ಡ ಕೆರೆ, ನಂಗಲಿ ದೊಡ್ಡ ಕೆರೆ, ಬ್ಯಾಟನೂರು ಮಲ್ಲಪ್ಪನಕೆರೆ ಸೇರಿ 31 ಕೆರೆಗಳಿಗೆ ನೀರು ಹರಿಯಲಿದೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಮಾತನಾಡಿ, ನಂಗಲಿ, ಗುಮ್ಲಾಪುರ, ಹೆಬ್ಬಣಿ, ಚಿನ್ನಹಳ್ಳಿ, ಮಂಚಿಗಾನಹಳ್ಳಿ, ಇನ್ನಿತರ ಕೆರೆಗಳಲ್ಲಿ ಜಾರಿ ಮರ ಬೆಳೆದು ಕೆರೆಯಂಗಳವನ್ನು ಆವರಿಸಿಕೊಂಡಿವೆ. ಅಧಿಕಾರಿಗಳ ಮಾತ್ರ ನಮಗೂ ಇದಕ್ಕೂ ಸಂಬಂಧ ವಿಲ್ಲದ ರೀತಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನೀರು ಕೆರೆಗಳಿಗೆ ಹರಿಸಿದ ನಂತರ ನೀರಿನ ಸಂರಕ್ಷಣೆ ಹೇಗೆ ಮಾಡಲು ಸಾಧ್ಯ ಎಂದು ಆರೋಪಿಸಿದರು.
-ಎಂ.ನಾಗರಾಜಯ್ಯ