Advertisement

ಕ್ರಿಸ್ತನ ಜನ್ಮಸ್ಥಳದಲ್ಲಿ ಈ ಬಾರಿ ಕ್ರಿಸ್ಮಸ್‌ ಇಲ್ಲ: ಇಸ್ರೇಲ್‌-ಹಮಾಸ್‌ ಯುದ್ಧವೇ ಕಾರಣ!

11:49 PM Dec 25, 2023 | Team Udayavani |

ಬೆತ್ಲೆಹೇಮ್‌: ಜಗತ್ತಿನಾದ್ಯಂತ ಸೋಮವಾರ (ಡಿ.25) ಕ್ರಿಸ್‌ಮಸ್‌ ಹಬ್ಬದ ಸಂಭ್ರಮ. ಆದರೆ ವಿಶ್ವಕ್ಕೇ ಕರುಣೆಯನ್ನು ಬೋಧಿಸಿದ ಯೇಸು ಕ್ರಿಸ್ತ ಜನಿಸಿದ ಬೆತ್ಲೆಹೇಮ್‌ನಲ್ಲಿ ಪ್ರಸಕ್ತ ವರ್ಷ ಆ ಸಂಭ್ರಮವೇ ಇಲ್ಲದಾಗಿದೆ. ಇಸ್ರೇಲ್‌ ಮತ್ತು ಹಮಾಸ್‌ ಉಗ್ರ ಸಂಘಟನೆಯ ನಡುವೆ ಅ.7ರಿಂದ ಶುರು ವಾಗಿರುವ ಘೋರ ಯುದ್ಧ ಮುಂದುವರಿದಿರುವುದೇ ಇದಕ್ಕೆ ಕಾರಣವಾಗಿದೆ.

Advertisement

2022ರ ಡಿಸೆಂಬರ್‌ನಲ್ಲಿ ಬೆತ್ಲೆಹೇಮ್‌ನ ರಸ್ತೆ ರಸ್ತೆಗಳಲ್ಲಿ ಮತ್ತು ಗಲ್ಲಿಗಳಲ್ಲಿ ಹಬ್ಬದ ಸಂಭ್ರಮವಿತ್ತು. ನಗರದ ಪ್ರಮುಖ ಸ್ಥಳ ಮ್ಯಾನೇಜರ್‌ ಸ್ಕ್ವಾರ್‌ನಲ್ಲಿ ಅಲಂಕಾರಗಳು, ವಿದ್ಯುತ್‌ ದೀಪಗಳ ಶೃಂಗಾರ ಇತ್ತು. ಪ್ರಸಕ್ತ ವರ್ಷ ಎಲ್ಲೆಡೆಯೂ ಮೌನ ಮತ್ತು ಪ್ಯಾಲೆಸ್ತೇನ್‌ ಸೈನಿಕರ ಗಸ್ತು ವಾಹನಗಳು ಮತ್ತು ಸೈರನ್‌ನದ್ದೇ ಸದ್ದು.

ಹಬ್ಬದ ಹಿನ್ನೆಲೆಯಲ್ಲಿ ಭರಪೂರ ವ್ಯಾಪಾರ ಮತ್ತು ಸಂಪಾದನೆಯನ್ನು ನಿರೀಕ್ಷೆ ಮಾಡಿದ್ದ ಅಲ್ಲಿನ ಹೊಟೇಲ್‌ಗ‌ಳಿಗೆ, ವಾಣಿಜ್ಯ ಮಳಿಗೆಗಳಿಗೆ ಭಾರೀ ನಿರಾಸೆಯಾಗಿದೆ. ಕ್ರಿಸ್‌ಮಸ್‌ ಟ್ರೀ ಇಲ್ಲ, ಸಾಂಪ್ರದಾಯಿಕವಾಗಿ ಇರುವ ಹಬ್ಬದ ಸಂಭ್ರಮವಿಲ್ಲ ಎಂದು ಹೊಟೇಲ್‌ ಮಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರತೀ ವರ್ಷದ ಅ.7ರ ಒಳಗಾಗಿ ಜಗತ್ತಿನ ಹಲವು ಭಾಗಗಳಿಂದ ಇಲ್ಲಿನ ಚರ್ಚ್‌ಗಳಲ್ಲಿನ ಕ್ರಿಸ್‌ಮಸ್‌ ಕಾರ್ಯಕ್ರಮ ವೀಕ್ಷಿಸಲು ಅವರ ಹೊಟೇಲ್‌ ಸೇರಿದಂತೆ ಪ್ರಮುಖ ವಾಸ್ತವ್ಯ ಹೂಡುವ ಸ್ಥಳಗಳು ಭರ್ತಿಯಾಗುತ್ತಿದ್ದವು. ಅ.7ರಂದು ಯುದ್ಧ ಶುರುವಾಗುತ್ತಿದ್ದಂತೆಯೇ ಯಾರೂ ಕೂಡ ಹೊಟೇಲ್‌ ಕಾಯ್ದಿರಿಸಲಿಲ್ಲ. ಬುಕ್‌ ಮಾಡಿದ್ದವರೂ, ಸುರಕ್ಷೆಯ ಕಾರಣದಿಂದ ರದ್ದು ಮಾಡಿದರು ಎಂದು ಅಳಲು ತೋಡಿಕೊಂಡರು.

1967ರಿಂದ ಇಸ್ರೇಲ್‌ – ಪ್ಯಾಲೆಸ್ತೀನ್‌ ನಡುವೆ ಸಂಘರ್ಷದ ವಾತಾವರಣ ಇದ್ದರೂ, ಪ್ರಸಕ್ತ ವರ್ಷದ ವಾತಾವರಣ 15 ವರ್ಷಗಳಲ್ಲಿಯೇ ಕಠಿನ ಸ್ಥಿತಿಯದ್ದು ಎಂದು ಹಲವರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next