Advertisement

Iran; ರೈಸಿ ಅಂತ್ಯಕ್ರಿಯೆಯಲ್ಲಿ ಹಮಾಸ್, ಹೌತಿ, ತಾಲಿಬಾನ್ ನಾಯಕರು ಭಾಗಿ

02:39 PM May 23, 2024 | Team Udayavani |

ಟೆಹ್ರಾನ್: ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆಯಲ್ಲಿ ತಾಲಿಬಾನ್‌ ನ ಉಪಪ್ರಧಾನಿ ಮುಲ್ಲಾ ಬರಾದರ್, ಹಮಾಸ್ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ಇರಾನ್ ಬೆಂಬಲಿತ ಹೌತಿ ಗುಂಪಿನ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳು ಹೆಲಿಕಾಪ್ಟರ್ ಮೇ 20ರಂದು ಅಜರ್ ಬೈಜಾನ್ ಗಡಿಯಿಂದ ಹಿಂದೆ ಬರುತ್ತಿದ್ದಾಗ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಸಾವಿರಾರು ಇರಾನ್ ಜನರು ಪಾಲ್ಗೊಂಡಿದ್ದ ಪ್ರಾರ್ಥನೆಯಲ್ಲಿ ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನೇತೃತ್ವ ವಹಿಸಿದ್ದರು.

63 ವರ್ಷದ ರೈಸಿ ಮತ್ತು ಅವರ ಅಧಿಕಾರಿ ವರ್ಗ ಭಾನುವಾರ ಅಜರ್‌ಬೈಜಾನ್-ಇರಾನ್ ಗಡಿಯಲ್ಲಿರುವ ಪ್ರದೇಶಕ್ಕೆ ಭೇಟಿ ನೀಡಿ ಹಿಂದಿರುಗಿದ ನಂತರ ತಬ್ರಿಜ್ ನಗರಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಾರಣವಾದ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಕುರಿತು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ ನ ಪ್ರಾಸಿಕ್ಯೂಟರ್ ಅವರು ತನಗೆ ಮತ್ತು ಇತರರಿಗೆ ಬಂಧನ ವಾರಂಟ್ ಕೋರುವುದಾಗಿ ಹೇಳಿದ ಎರಡು ದಿನಗಳ ನಂತರ ಇಸ್ಮಾಯಿಲ್ ಹನಿಯೇಹ್ ಅವರು ಟ್ರೆಹ್ರಾನ್‌ಗೆ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next