Advertisement

ಪ್ರಧಾನಿ ಭೇಟಿಯಿಂದ ಯಾವುದೇ ಬದಲಾವಣೆ ಆಗಿಲ್ಲ; ಧ್ರುವನಾರಾಯಣ

04:25 PM Jun 22, 2022 | Team Udayavani |

ಕೊಳ್ಳೇಗಾಲ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎರಡು ದಿನ ಭೇಟಿ ಮಾಡಿ, ಹಳೆಯ ಕಾಮಗಾರಿಗಳಿಗೆ ಹೊಸ ರೂಪ ನೀಡಿ ಉದ್ಘಾಟನೆ ಮಾಡಿದ್ದು, ಇದರಿಂದ ಯಾವುದೇ ತರಹದ ಬದಲಾವಣೆ, ಪ್ರಯೋಜನ ಆಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಆರೋಪಿಸಿದರು.

Advertisement

ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಇತ್ತೀಚಿಗೆ ನಡೆದ ಚಾಮುಲ್‌ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದ 4 ನಿರ್ದೇಶ ಕರನ್ನು ಸನ್ಮಾನಿಸಿ ಮಾತನಾಡಿದರು.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರೀಯ ವಸತಿ ಶಾಲೆಗಳನ್ನು ಮಂಜೂರು ಮಾಡಿತ್ತು. ಆದರೆ, ಎನ್‌ ಡಿಎ ಸರ್ಕಾರ ಇದುವರೆಗೂ ಒಂದು ವಸತಿ ಶಾಲೆ ಮಂಜೂರು ಮಾಡಿಲ್ಲ ಎಂದು ದೂರಿದರು.

ಪ್ರಧಾನಿಗೆ ಸೋಲಿನ ಬಹುಮಾನ: ಇತ್ತೀಚಿಗೆ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನ ವ ಣೆವೇಳೆ ಬಿಜೆಪಿಯ ಮುಖಂಡರು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು, ಮೈಸೂರಿಗೆ ಭೇಟಿ ನೀಡಲಿದ್ದು, ಅವರ ನೆನಪಿಗಾಗಿ ಮತ ನೀಡುವಂತೆ ಪ್ರಚಾರ ಮಾಡಿದ್ದರು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಫ‌ಲ್ಯ  ಅರಿತ ಪದವೀಧರರು ಬಿಜೆಪಿ ಅಭ್ಯರ್ಥಿ ಸೋಲಿಸುವ ಮೂಲಕ ಪ್ರಧಾನಿಗೆ ಸೋಲಿನ ಬಹುಮಾನ ನೀಡಿದ್ದಾರೆ ಎಂದು ತಿಳಿಸಿದರು.

ಬಡವರ ಸುಧಾರಣೆ ಆಗಿಲ್ಲ: ಈ ಹಿಂದೆ ಪ್ರಧಾನಿ ಆಗಿದ್ದ ಮನ ಮೋಹನ್‌ ಸಿಂಗ್‌ 30 ಕೋಟಿ ಬಡ ಜನರನ್ನು ಸುಧಾರಣೆ ಮಾಡಲು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು. ಆದರೆ, ಪ್ರಧಾನಿ ಮೋದಿ 8 ವರ್ಷದ ಅವಧಿಯಲ್ಲಿ 20 ಕೋಟಿ ಬಡವರನ್ನು ಸುಧಾರಣೆ ಮಾಡುವಲ್ಲಿ ವಿಫ‌ಲರಾಗಿದ್ದಾ ರೆ ಎಂದು ದೂರಿದರು.

Advertisement

ಕೇಂದ್ರದಿಂದ ಅನುದಾನ  ಬಂದಿಲ್ಲ: ದೇಶಾದ್ಯಂತ ಭದ್ರತೆ ಸಂಪೂರ್ಣ ವಿಫ‌ಲವಾಗಿದೆ. ಕೇಂದ್ರ ಸರ್ಕಾರದ ಆಡಳಿತ ವೈಫ‌ಲ್ಯದಿಂದಾಗಿ ಜನರು ಬೀದಿಗೆ ಇಳಿದು ಪ್ರತಿಭಟಿಸುವಂತಹ ವಾತಾ ವ ರಣ ಸೃಷ್ಟಿಯಾಗಿದೆ. ರಾಜ್ಯಕ್ಕೆ ಬರಬೇಕಾದ ಜಿಎ ಸ್‌ಟಿ ಪಾಲು ಸಹ ಬಂದಿಲ್ಲ. ಕೇಂದ್ರ ಸರ್ಕಾರದಿಂದ ಅನುದಾ ನಸಹ ಬಂದಿಲ್ಲ ಎಂದು ತಿಳಿಸಿದರು.

ಚಾಮುಲ್‌ ಗದ್ದುಗೆ ಹಿಡಿಯುತ್ತೇವೆ: ಇತ್ತೀಚಿಗೆ ಚಾಮುಲ್‌ಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ನಾಲ್ವರು ಆಯ್ಕೆಯಾಗಿದ್ದು, ಗದ್ದುಗೆ ಯನ್ನು ಹಿಡಿ ಯಲಾಗುತ್ತದೆ ಎಂದರು.

ಪಠ್ಯ ಪುಸ್ತಕ: ರಾಜ್ಯ ಸರ್ಕಾರ ಪಠ್ಯ ಪು ಸ್ತಕ ಮುದ್ರಣದ ವೇಳೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌, ಬಸವಣ್ಣ ಸೇರಿ  ಅನೇಕ ಮಹ ನೀಯರ ಪಾಠ ಗ ಳನ್ನು ತಿರುಚುವ ಕೆಲಸ ಮಾಡಲಾಗಿದೆ. ಈ ಮೂಲಕ ಮಹನೀಯರಿಗೆ ಅಗೌರವ ತರಲಾಗಿದೆ ಎಂದು ಆರೋಪಿಸಿದರು.

ಶಾಸಕರಾದ ಪುಟ್ಟ ರಂಗ ಶೆಟ್ಟಿ, ಆರ್‌. ನರೇಂದ್ರ, ಮಾಜಿ ಶಾಸಕರಾದ ಎಸ್‌. ಜ ಯಣ್ಣ, ಎ.ಆ ರ್‌. ಕೃ ಷ್ಣ  ಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತೋಟೇಶ್‌, ಉಪ್ಪಾರನಿಗ ಮದ ಮಾಜಿ ಅಧ್ಯಕ್ಷ ಶಿವಕುಮಾರ್‌, ನಗರ ಸಭಾ ಸದಸ್ಯ ಮಂಜುನಾಥ್‌, ಕಾಂಗ್ರೆಸ್‌ ಮುಖಂಡ ಗಣೇಶ್‌ ಪ್ರಸಾದ್‌, ರಾಮ ಚಂದ್ರ, ಕೊಪ್ಪಾಳಿ  ಮಹದೇವನಾಯಕ, ಅಕ್ಮಲ್‌ ಪಾಷ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next