Advertisement

ಡೋಕ್ಲಾಂ ಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ: ಕೇಂದ್ರ

05:42 PM Jan 19, 2018 | Team Udayavani |

ನವದೆಹಲಿ: ಡೋಕ್ಲಾಂನಲ್ಲಿ ಚೀನಾ ಸೇನಾ ನೆಲೆ ಸ್ಥಾಪಿಸಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಗುರುವಾರ ಪ್ರತಿಕ್ರಿಯೆ ನೀಡಿದೆ. ಅಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಆಗಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ. 

Advertisement

ಅಲ್ಲಿನ ಬೆಳವಣಿಗೆಗಳ ಬಗ್ಗೆ ಪದೇ ಪದೆ ಪ್ರಶ್ನೆಗಳು ಏಳುತ್ತಿವೆ. ಡೋಕ್ಲಾಂನ ಯಥಾಸ್ಥಿತಿಯಲ್ಲಿ ಯಾವುದೇ ಬದಲಾಗಿಲ್ಲ ಎಂದಿದ್ದಾರೆ. 

ಇನ್ನೊಂದೆಡೆ, ಕಾಂಗ್ರೆಸ್‌ ದೇಶದ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಪಕ್ಷದ ವಕ್ತಾರ ಅನಿಲ್‌ ಬಾಲುನಿ ಮಾತನಾಡಿ, ಜನರು ಸೇನಾ ಮುಖ್ಯಸ್ಥರ ಮಾತುಗಳನ್ನು ನಂಬುತ್ತಾರೆಯೇ ಹೊರತು, ಕಾಂಗ್ರೆಸ್‌ನ ಆರೋಪಗಳನ್ನಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next