ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 2018-19ನೇ ಸಾಲಿನ ಬಜೆಟ್ ಅನ್ನು ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದು, ಈ ಬಾರಿಯೂ ವೈಯಕ್ತಿಕ ಆದಾಯ ತೆರಿಗೆ ಸ್ಲಾಬ್ ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಘೋಷಿಸಿದ್ದಾರೆ.
ಆದಾಯ ತೆರಿಗೆ ಮಿತಿ ಹಿಂದಿನನಂತೆಯೇ ಮುಂದುವರಿಯಲಿದೆ. 2.5 ಲಕ್ಷ ಆದಾಯಕ್ಕೆ ಸದ್ಯ ಯಾವುದೇ ತೆರಿಗೆ ಇಲ್ಲ. 2.5ರಿಂದ 5ಲಕ್ಷದವರೆಗಿನ ಆದಾಯಕ್ಕೆ ಶೇ.5ರಷ್ಟು ತೆರಿಗೆ, 5ರಿಂದ 10ಲಕ್ಷದವರೆಗಿನ ಆದಾಯಕ್ಕೆ ಶೇ.20ರಷ್ಟು ತೆರಿಗೆ, 40 ಸಾವಿರ ರೂ.ಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಜಾರಿಯಾಗಲಿದೆ.
ದೀರ್ಘಕಾಲದ ಬಂಡವಾಳದ ಮೇಲಿನ ಡಿವಿಡೆಂಡ್ ಗೆ ತೆರಿಗೆ, ವೈದ್ಯಕೀಯ ಶುಲ್ಕ 40 ಸಾವಿರ ರೂಪಾಯಿವರೆಗೆ ತೆರಿಗೆ ವಿನಾಯ್ತಿ.
ಹಿರಿಯ ನಾಗರಿಕರಿಗೆ ರಿಲೀಫ್;
ಆರೋಗ್ಯ ವಿಮೆಯಲ್ಲಿ 50 ಸಾವಿರ ರೂಪಾಯಿವರೆಗೆ ಟ್ಯಾಕ್ಸ್ ರಿಲೀಫ್.