Advertisement

ಭಾರತದ ಎದುರು ಯಾವುದೇ ತಪ್ಪು ಮಾಡುವಂತಿಲ್ಲ: ಜ್ಯಾಕ್ ಕ್ಯಾಲಿಸ್

12:25 PM Jun 03, 2019 | Team Udayavani |

ಲಂಡನ್: ಈಗಾಗಲೇ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ಮುಂದಿನ ಪಂದ್ಯದಲ್ಲಿ ಬಲಿಷ್ಠ ಭಾರತದ ಎದುರು ಸೆಣಸಾಡಲಿವೆ. ಈ ಬಗ್ಗೆ ಮಾತನಾಡಿದ ದ.ಆಫ್ರಿಕಾ ಮಾಜಿ ಆಟಗಾರ ಜ್ಯಾಕ್ ಕ್ಯಾಲಿಸ್ ‘ ಭಾರತದ ತಂಡದ ಎದುರು ಸಣ್ಣ ತಪ್ಪಿಗೂ ಅವಕಾಶ ನೀಡದಂತೆ ಆಡಬೇಕು’ ಎಂದು ಕಿವಿಮಾತು ಹೇಳಿದರು.

Advertisement

ಹರಿಣಗಳ ಈ ಪ್ರದರ್ಶನ ತೀರಾ ನಿರಾಶಾದಾಯಕವಾಗಿದೆ. ಕೂಟದಲ್ಲಿ ಉಳಿಯಬೇಕಾದರೆ ಮುಂದಿನ ಪಂದ್ಯದ ಗೆಲುವು ತುಂಬಾ ಅಗತ್ಯ. ಇಲ್ಲದೇ ಹೋದಲ್ಲಿ ಕೂಟ ಕಾವು ಪಡೆಯುವ ಹೊತ್ತಿಗೆ ದ. ಆಫ್ರಿಕಾ ತಂಡ ಕೂಟದಿಂದಲೇ ಹೊರ ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಕೂಟದ ಫೇವರೇಟ್ ಎಂದು ಪರಿಗಣಿಸಲ್ಪಟ್ಟ ಭಾರತ ತಂಡದ ವಿರುದ್ಧ ಜೂನ್ ಐದರಂದು ಆಡಲಿದೆ. ಈ ಬಗ್ಗೆ ಐಸಿಸಿ ಕಾಲಂನಲ್ಲಿ ಬರೆದಿರುವ ಕ್ಯಾಲಿಸ್ ಭಾರತ ಈ ಟೂರ್ನಿಯಲ್ಲಿ ಇನ್ನಷ್ಟೇ ಮೊದಲ ಪಂದ್ಯದಲ್ಲಿ ಆಡಲಿದೆ. ಹಾಗಾಗಿ ಅವರಿಗೆ ಮೊದಲ ಪಂದ್ಯದ ಒತ್ತಡ ಸಹಜವಾಗಿಯೇ ಅವರ ಮೇಲೆ ಇದೆ. ಆದರೆ ಮೊದಲ ಪಂದ್ಯವಾಗಲಿ ಅಥವಾ ಎರಡನೆಯದೇ ಆಗಲಿ ಭಾರತದ ಎದುರು ಆಡುವುದು ಸುಲಭವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next