Advertisement

ಪೆಟ್ರೋಲ್‌ ಖರೀದಿಸಿದರೆ ಇನ್ನು ಕ್ಯಾಶ್‌ಬ್ಯಾಕ್‌ ಸಿಗಲ್ಲ!

10:17 AM Sep 26, 2019 | Sriram |

ಮುಂಬಯಿ: ಪೆಟ್ರೋಲ್‌, ಡೀಸೆಲ್‌ ಅನ್ನು ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ನೀಡುತ್ತಿದ್ದ ಕ್ಯಾಶ್‌ಬ್ಯಾಕ್‌ ಇನ್ನು ಬಂದ್‌ ಆಗಲಿದೆ.ಈ ಬಗ್ಗೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ದಾರರಿಗೆ ಈಗಾಗಲೇ ಎಸ್‌ಎಂಎಸ್‌ ಸಂದೇಶಗಳು ಬರತೊಡಗಿವೆ. ಅ.1ರಿಂದ ಈ ಹೊಸ ನಿಯಮ ಅನ್ವಯವಾಗಲಿದೆ.

Advertisement

ಕ್ರೆಡಿಟ್‌ ಕಾರ್ಡ್‌ದಾರರಿಗೆ ಶೇ.0.75ರಷ್ಟು ಕ್ಯಾಶ್‌ಬ್ಯಾಕ್‌ ಲಭ್ಯವಾಗುತ್ತಿತ್ತು. ಇನ್ನು ಮುಂದೆ ಈ ಆಫ‌ರ್‌ ನೀಡದೇ ಇರಲು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ನಿರ್ಧರಿಸಿವೆ. ಅದರಂತೆ ಎಸ್‌ಬಿಐ ಕಾರ್ಡ್‌ದಾರರಿಗೆ ಆಫ‌ರ್‌ ಇಲ್ಲವಾಗಲಿದೆ.

ಹೊಸ ತೀರ್ಮಾನದಂತೆ ಇನ್ನು ಇಂಡಿಯನ್‌ ಆಯಿಲ್‌, ಹಿಂದೂಸ್ಥಾನ್‌ ಪೆಟ್ರೋಲಿಯಂ, ಭಾರತ್‌ ಪೆಟ್ರೋಲಿಯಂ ಪೆಟ್ರೋಲ್‌ ಬಂಕ್‌ಗಳಲ್ಲಿ ಸಿಗುತ್ತಿದ್ದ ಕ್ಯಾಶ್‌ಬ್ಯಾಕ್‌ ರದ್ದಾಗಲಿದೆ.

2016ರಲ್ಲಿ ನೋಟ್‌ ಬ್ಯಾನ್‌ ಬಳಿಕ ಡಿಜಿಟಲ್‌ ಪಾವತಿ ಉತ್ತೇಜನಕ್ಕೆ ಪೆಟ್ರೋಲ್‌ ಪಂಪ್‌ಗ್ಳಲ್ಲಿ ಕಾರ್ಡ್‌ದಾರರಿಗೆ ಕ್ಯಾಶ್‌ಬ್ಯಾಕ್‌ ನೀಡಲು ಕೇಂದ್ರ ಸರಕಾರ ಸೂಚಿಸಿತ್ತು. ಇದರೊಂದಿಗೆ ಮಾರಾಟಗಾರರು ಪಾವತಿಸುವ ಕಾರ್ಡ್‌ ಪೇಮೆಂಟ್‌ ಶುಲ್ಕಗಳನ್ನೂ ರದ್ದುಪಡಿಸಲು ಅದು ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next