Advertisement
ಜನರ ಒಳಿತಿಗಾಗಿಯೇ ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದರ ಸಹಿತ ಎಲ್ಲ ಮುನ್ನೆಚ್ಚರಿಕೆಗಳನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪಿಎಂಎವೈ ಅಡಿಯಲ್ಲಿ ಮನೆಗಳನ್ನು ನಿರ್ಮಿಸುವ ಅವಧಿ ಲಾಕ್‌ಡೌನ್‌ನಿಂದಾಗಿ ಗಣನೀಯವಾಗಿ ಕಡಿಮೆಯಾಯಿತು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅನೇಕ ಕೂಲಿಕಾರರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು. ಅವರೂ ಗೃಹ ನಿರ್ಮಾಣಕ್ಕೆ ಕೈ ಜೋಡಿಸಿದರು. ಅದರಿಂದ ಈ ಮೊದಲು ಪಿಎಂಎವೈ ಅಡಿಯಲ್ಲಿ ಒಂದು ಮನೆ ನಿರ್ಮಿಸಲು ಬೇಕಾಗಿದ್ದ ಸುಮಾರು 125 ದಿನಗಳ ಅವಧಿ 45ರಿಂದ 60 ದಿನಗಳಿಗೆ ತಗ್ಗಿತು. ಹಾಗಾಗಿ ನಿರೀಕ್ಷೆಗೆ ಮುನ್ನ ಮನೆಗಳು ಬಡವರ ಕೈ ಸೇರಲು ಸಹಾಯವಾಯಿತು. ಇಷ್ಟು ಕಡಿಮೆ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿರುವುದು ಒಂದು ದಾಖಲೆಯೇ ಸರಿ ಎಂದರು.