Advertisement
ಗುರುಪುರ ಕೈಕಂಬ ರಾಜ್ಯ ಹೆದ್ದಾರಿಯಿಂದ ಕಂದಾವರ -ಧೂಮಾವತಿ ದ್ವಾರ- ಮೂಡುಕರೆ-ಕೊಳಂಬೆ ಬೈಲ ಬೀಡು-ಅದ್ಯಪಾಡಿ-ಕೆಂಜಾರು ವರೆಗೆ ಲೋಕೋ ಪಯೋಗಿ ಇಲಾಖೆಯೂ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕಾಂಕ್ರಿಟ್‌ವ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಉತ್ತಮ ರಸ್ತೆಯಿದ್ದರೂ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸದೇ ಇರುವುದು ಗ್ರಾಮಸ್ಥರಿಗೆ ಕೊರತೆ ಎದುರಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದ ಸಂಪರ್ಕ ರಸ್ತೆಯಾಗಿ ಕಂದಾವರ –
ಧೂಮಾವತಿ ದ್ವಾರ-ಮೂಡುಕರೆ-ಕೊಳಂಬೆ ಬೈಲಬೀಡು-ಅದ್ಯಪಾಡಿ-ಕೆಂಜಾರು ರಸ್ತೆ ಈಗ ಭಾರಿ ಪ್ರಮುಖ ರಸ್ತೆಗಳಲ್ಲಿ ಒಂದು. ಕೈಕಂಬ ಧೂಮಾವತಿ ದ್ವಾರ ರಾಜ್ಯ ಹೆದ್ದಾರಿ 101ರಿಂದ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದವರೆಗೆ ಸುಮಾರು 9 ಕಿ.ಮೀ. ದೂರವಿದೆ. ಈ ರಸ್ತೆಯನ್ನು ಹೆಚ್ಚಾಗಿ ಬಂಟ್ವಾಳ, ಬಿಸಿ ರೋಡ್, ಕುಪ್ಪೆಪದವು ಕಡೆಗಳಿಂದ ಬರುವ ವಾಹನಗಳು, ಕೈಕಂಬದಿಂದ ಕಾವೂರು-ಕೂಳೂರು- ಬೈಕಂಪಾಡಿ, ಮಂಗಳೂರಿಗೆ ಹೋಗುವ ವಾಹನಗಳು ಹೆಚ್ಚಾಗಿ ಈ ರಸ್ತೆಯನ್ನುಉಪಯೋಗಿಸುತ್ತವೆ. ಇದು ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಸುದ್ದಿ ಇಲ್ಲದ ಈ ರಸ್ತೆಯಲ್ಲಿ ದಿನನಿತ್ಯ ಹೆಚ್ಚು ವಾಹನಗಳು ಸಂಚರಿಸುತ್ತವೆ. ಆದರೆ ಸಾರ್ವಜನಿಕರಿಗೆ ಬಸ್ ಸಂಚಾರ ಮಾತ್ರ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ.
Related Articles
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಾವೂರು, ಮಂಗಳೂರು, ಬಿ.ಸಿ. ರೋಡ್ ಕಡೆಗೆ ಹೋಗುವ ಹಾಗೂ ಬರುವ ವಾಹನಗಳು ಈ ರಸ್ತೆಯನ್ನು ಉಪಯೋಗಿಸುವ ಕಾರಣ ನಂತೂರಿನಲ್ಲಿ ವಾಹನ ಸಂಚಾರಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ನಂತೂರು ಟ್ರಾಫಿಕ್ ಜಾಂ ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತಿದೆ.
Advertisement
ಡಿಸಿಗೆ ಮನವಿಕೆಎಸ್ಆರ್ಟಿಸಿಯ ಜಿಲ್ಲಾ ಧಿಕಾರಿಯವರಿಗೆ, ಆರ್‌ಟಿಒಗೆ ಗ್ರಾಮ ಸ್ಥರು ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿ 2 ವರ್ಷಗಳು ಕಳೆದಿವೆ. ಕೆಎಸ್‌ಆರ್‌ಟಿಸಿಯಿಂದ ರಸ್ತೆಯ ಸರ್ವೇ ಕೂಡ ನಡೆದಿದೆ. ಇನ್ನೂ ಕೂಡ ಬಸ್ ವ್ಯವಸ್ಥೆಯಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. ಮುಂದಿನ ದಿನಗಳಲ್ಲಿ
ಬಸ್ ವ್ಯವಸ್ಥೆ
ಅದ್ಯಪಾಡಿ, ಕೊಳಂಬೆ, ಕಂದಾವರ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಕೈಕಂಬ -ಕೆಂಜಾರು ರಸ್ತೆಯಲ್ಲಿ ಬಸ್ ವ್ಯವಸ್ಥೆಯ ಬಗ್ಗೆ ಈಗಾಗಲೇ ಕೆಎಸ್‌ಆರ್‌ಟಿಸಿ ಹಾಗೂ ಆರ್‌ಟಿಒ ಅಧಿಕಾರಿಗಳಲ್ಲಿ ಚರ್ಚಿಸಲಾಗಿದೆ. ಖಾಸಗಿ ಬಸ್‌ಗಳಿಗೆ ಪ್ರಥಮ ಆದ್ಯೆತ, ಅವರು ಹಿಂಜರಿದರೆ ಸರಕಾರಿ ಬಸ್ ವ್ಯವಸ್ಥೆ ಮಾಡಲಾಗುವುದು. ನಗರಗಳ ಟ್ರಾಫಿಕ್ ಜಾಮ್ ಅಗುವುದನ್ನು ಕಡಿಮೆ ಗೊಳಿಸುವ ಮೂಲಕ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.
– ಡಾ| ಭರತ್ ಶೆಟ್ಟಿ ವೈ.,
ಶಾಸಕರು, ಮಂಗಳೂರು ನಗರ ಉತ್ತರ – ಸುಬ್ರಾಯ ನಾಯಕ್ ಎಕ್ಕಾರು