ನವದೆಹಲಿ/ಬೀಜಿಂಗ್ : ಭಾರತ ಮತ್ತು ಚೀನಾ ನಡುವೆ ಬುಧವಾರ ನಡೆದ 14ನೇ ಸುತ್ತಿನ ಮಾತುಕತೆಯಲ್ಲಿ ಬಿಕ್ಕಟ್ಟು ಪರಿಹಾರ ಸೂತ್ರಗಳು ವ್ಯಕ್ತವಾಗಿಲ್ಲ. ಹೀಗಾಗಿ, ಎರಡೂ ದೇಶಗಳ ಮಿಲಿಟರಿ ಕಮಾಂಡರ್‌ಗಳು ಸತತ ಸಂಪರ್ಕದಲ್ಲಿದ್ದುಕೊಂಡು ಮಾತುಕತೆ ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಲಾಗಿದೆ.
ಚೀನಾಕ್ಕೆ ಹೊಂದಿಕೊಂಡಂತೆ ಇರುವ ಚುಶೂಲ್‌ನಲ್ಲಿ ನಡೆದಿದ್ದ ಮಾತುಕತೆ ವೇಳೆ, ಪೂರ್ವ ಲಡಾಖ್‌ನಲ್ಲಿರುವ ಪಟ್ರೋಲಿಂಗ್ ಪಾಯಿಂಟ್ 15ರಿಂದ ಸೇನೆ ವಾಪಸಾತಿ ಬಗ್ಗೆ ಪ್ರಧಾನವಾಗಿ ಚರ್ಚೆಯಾಯಿತು. ಆದರೆ, ಎರಡೂ ಕಡೆಯವರು ತಮ್ಮ ತಮ್ಮ ನಿಲುವಿಗೇ ಬದ್ಧವಾಗಿದ್ದರಿಂದ ಮಾತುಕತೆಯಲ್ಲಿ ಧನಾತ್ಮಕ ಮುಕ್ತಾಯ ಕಾಣಲಿಲ್ಲ.
ಭಾರತ ಮತ್ತು ಚೀನಾ ಸರ್ಕಾರದ ರಕ್ಷಣೆ, ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ, ಯುದ್ಧ ನಡೆದರೆ, ಭಾರತವೇ ಗೆಲ್ಲಲಿದೆ ಎಂಬ ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಮಾತಿಗೆ ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಮುಖ ಹುದ್ದೆಗಳಲ್ಲಿ ಇರುವವರು ಪ್ರಚೋದನಾತ್ಮಕ ಮತ್ತು ಬಾಂಧವ್ಯಕ್ಕೆ ಧಕ್ಕೆ ತರುವ ಮಾತುಗಳನ್ನಾಡಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪುನೀತ್ ಭಾವಚಿತ್ರದೊಂದಿಗೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ ಬಾಲಕ !