Advertisement

ಪ್ರಿಯಾಂಕ್ ಖರ್ಗೆ ಆಡಿಯೋದಲ್ಲಿ ಬಾಂಬ್ ಇಲ್ಲ, ಏನೂ ಇಲ್ಲ: ಸಿಎಂ

02:32 PM Apr 23, 2022 | Team Udayavani |

ದಾವಣಗೆರೆ:ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಯಾವ ಬಾಂಬ್ ಇಲ್ಲ, ಏನೂ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಬಾಂಬ್ ಸ್ಪೋಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅದರಲ್ಲಿ  ಏನೂ ಇಲ್ಲವಲ್ಲ, ನಿಮ್ಮ ಪ್ರಕಾರ ಏನಿದೆ ನೀವೇ ಹೇಳಿ.ಆಡಿಯೋ ದಲ್ಲಿ ಏನಿದೆ, ಆರೋಪಿಗಳು ಏನು ಮಾತನಾಡಿದ್ದಾರೆಂಬ ಬಗ್ಗೆ ತನಿಖೆಗೆ ಒಳಪಡಿಸುತ್ತೇವೆ ಎಂದರು.

ಬೆಂಗಳೂರಿನ ಶಾಲೆಗಳಲ್ಲಿ ಹುಸಿ ಬಾಂಬ್ ಕರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಪಾಕಿಸ್ಥಾನನ, ಸಿರಿಯಾದಿಂದ ಬಂದಿದೆ ಎಂಬ ಗೊಂದಲವಿದೆ. ಆ ರೀತಿಯ ಕರೆ, ಇಮೇಲ್ ಗಳು ಹಿಂದೆಯೂ ಸಹ ಬಂದಿವೆ. ಅವುಗಳ ಇ ಮೇಲ್ ಇದ್ದರೆ ಯಾವ ದೇಶದಿಂದ ಬಂದಿವೆ ಅಂತ ಸುಲಭವಾಗಿ ಪತ್ತೆ ಹಚ್ಚಬಹುದು.ಈ ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ, ಗಂಭೀರವಾದ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ : ಸರಕಾರಕ್ಕೆ ಬಿಸಿತುಪ್ಪವಾದ PSI ಪರೀಕ್ಷೆ ಹಗರಣ: ಖರ್ಗೆ ಆಡಿಯೋ ಟೇಪ್ ತನಿಖೆಗೆ ಸಿಎಂ‌ ನಿರ್ಧಾರ

ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆ ನಡೆಸಲು ಸಿಐಡಿಗೆ ಮುಕ್ತ ಅವಕಾಶ ನೀಡಿದ್ದೇವೆ.ಯಾರ್ಯಾರು ಭಾಗಿಯಾಗಿದ್ದಾರೆಂಬ ತನಿಖೆ ನಡೆಸಿ ಸೂಕ್ರ ಕ್ರಮಕೈಗೊಳ್ಳುತ್ತೇವೆ. ತನಿಖೆ ವೇಳೆ ಯಾವುದೇ ಪಕ್ಷದವರಾದರು ನಿರ್ದಾಕ್ಷಿಣ್ಯವಾದ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

ಪರೀಕ್ಷಾ ಕೇಂದ್ರದಲ್ಲಿ ಅಕ್ರಮವೆಸಗಲು ಸಹಕಾರ ನೀಡಿದವರ ವಿರುದ್ಧ ಕಠಿಣ ಕ್ರಮ. ಸಂಪುಟ ವಿಸ್ತರಣೆ ವಿಚಾರ ವರಿಷ್ಟರ ಜೊತೆ ಚರ್ಚೆ ಬಳಿಕ ನನಗೂ ಮಾಹಿತಿ ಸಿಗಲಿದೆ. ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಬಗ್ಗೆ ಸಂಪುಟ ರಚನೆ ಬಳಿಕ‌ ತಿಳಿಸುವೆ ಎಂದರು.

ಆಡಿಯೋದಲ್ಲಿ ಏನಿದೆ?

ಆಡಿಯೋದಲ್ಲಿ ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿ ಮತ್ತು ಮಧ್ಯವರ್ತಿಯೊಬ್ಬ ಮಾತನಾಡಿದ್ದಾರೆ ಎನ್ನಲಾಗಿದ್ದು, ಪರೀಕ್ಷೆಗೆ ಮೊದಲೇ  ಅಕ್ರಮಕ್ಕೆ ಅನುಕೂಲವಾಗುವ ಕೇಂದ್ರವನ್ನು ಮಂಜೂರು ಮಾಡುವಂತೆ ಅರ್ಜಿ ಸಂಖ್ಯೆ ಕಳುಹಿಸುವಂತೆ ಕೇಳುತ್ತಿರುವುದು ಆಡಿಯೋದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next