Advertisement

ಹಳಿಯಾಳದಲ್ಲಿ ಗೋ ವಧಾಲಯವಿಲ್ಲ ; ಸುನೀಲ್‌ ಹೆಗಡೆಗೆ ತಿರುಗೇಟು 

12:13 PM May 25, 2018 | Team Udayavani |

ಹಳಿಯಾಳ: ಹಳಿಯಾಳದಲ್ಲಿ ಯಾವುದೇ ಗೋ ವಧಾಲಯ ಇಲ್ಲ, ಇಲ್ಲಿಯ ಚಿಕನ್‌ ಅಂಗಡಿದಾರರಿಗೆ ನಾವು ತೊಂದರೆ ಕೊಡಲ್ಲ. ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಮಾಜಿ ಶಾಸಕ ಸುನೀಲ್‌ ಹೆಗಡೆ ತಾಕತ್ತಿದ್ದರೆ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿ ಹಾಗೂ ಪುರಸಭೆಗೆ ಬಂದು ಚರ್ಚೆ ಮಾಡಲಿ ಎಂದು ಪುರಸಭೆ ಹಿರಿಯ ಸದಸ್ಯ ಸುರೇಶ್‌ ತಳವಾರ ಸವಾಲು ಹಾಕಿದ್ದಾರೆ.

Advertisement

ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಸುನೀಲ್‌ ಹೆಗಡೆ ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಅವರು, ಪುರಸಭೆಯಲ್ಲಿ ಸದಸ್ಯರು ದಲಾಲಗಿರಿ ಮಾಡುತ್ತಿದ್ದಾರೆಂದು ನೀಡಿದ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ, ಇದು ಸದಸ್ಯರಿಗೆ ಅವಮಾನ ಮಾಡಿದಂತಾಗಿದೆ ಎಂಂದು ಆರೋಪಿಸಿದರು.

2002ರಲ್ಲಿ ಪಪಂ ಅಧ್ಯಕ್ಷರಾಗಿದ್ದ ಸುನೀಲ್‌ ಹೆಗಡೆ ಎರಡೂವರೆ ವರ್ಷ ಅಧಿಕಾರ ಮಾಡಿ
ಬಳಿಕ ಪೂರ್ಣ ಅವ ಧಿ ಸದಸ್ಯರಾಗಿ ಇರದೆ ಅರ್ಧಕ್ಕೆ ರಾಜೀನಾಮೆ ನೀಡಿದ್ದರಿಂದ ಪುರಸಭೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದರು.

ಚುನಾವಣೆಯಲ್ಲಿ ಸೋತಿರುವ ಹಾಗೂ ಹಳಿಯಾಳ ಪಟ್ಟಣದಲ್ಲಿ ಕಡಿಮೆ ಮತ ಗಳಿಸಿರುವ ಅವರಿಗೆ ಈ ಹಿಂದೆ ಜೆಡಿಎಸ್‌ ಪಕ್ಷದಲ್ಲಿದ್ದಾಗ ಇರದ ಹಿಂದುತ್ವ ಅಜೆಂಡಾ ಬಿಜೆಪಿಗೆ ಬಂದ ಮೇಲೆ ಬಂದಿದೆಯಾ? ಪೊಳ್ಳು ಹಿಂದುತ್ವದ ಡೊಂಬರಾಟ ಹಳಿಯಾಳದಲ್ಲಿ ನಡೆಯಲ್ಲ. ಮುಂದಿನ ಪುರಸಭೆ ಸೇರಿದಂತೆ ಎಲ್ಲ ಚುನಾವಣೆಗಳನ್ನು ಕಾಂಗ್ರೆಸ್‌ ಪಕ್ಷವೇ ಗೆಲ್ಲಲಿದೆ ಎಂದು ನುಡಿದರು.

ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ ಮಾತನಾಡಿ ಗೋ, ದನದ ಮಾಂಸದ ಮಾರುಕಟ್ಟೆ ಸರ್ಕಾರಿ ಜಾಗೆಯಲ್ಲಿ ಇಲ್ಲ. ಖಾಸಗಿ ಜಾಗೆಯಲ್ಲಿ ಇರಬಹುದು. ಅದು ನಮ್ಮ ಗಮನಕ್ಕೆ ಇಲ್ಲ. ಇನ್ನು ಚಿಕನ್‌ ಅಂಗಡಿಗಳು ಹಲವಾರು ಬಿಜೆಪಿ ಮುಖಂಡರ ಒಡೆತನದ ಜಾಗೆಯಲ್ಲಿಯೇ ನಡೆಯುತ್ತಿದ್ದು ಬಡವರ ಹೊಟ್ಟೆ ಮೇಲೆ ಹೊಡೆಯುವ ಕಾರ್ಯ ನಾವು ಮಾಡಲ್ಲ. ಚಿಕನ್‌ ಅಂಗಡಿಕಾರರಿಗೆ ಪ್ರತ್ಯೇಕ ಮಾರುಕಟ್ಟೆಗೆ ಕ್ರಿಯಾಯೋಜನೆ ಮಾಡಿದ್ದು ಸದ್ಯದಲ್ಲೇ ಆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

Advertisement

ಅಲ್ಪಸಂಖ್ಯಾತ ಸಮುದಾಯದ ಮುಖಂಡ ಹಾಗೂ ಪುರಸಭೆ ಸದಸ್ಯ ಫಯಾಜ ಶೇಖ ಹಾಗೂ ಇನಾಯಿತುಲ್ಲಾ ಬೇಪಾರಿ ಮಾತನಾಡಿ ಪಟ್ಟಣದಲ್ಲಿ ಸರ್ಕಾರಿ ಸ್ಥಳದಲ್ಲಿ ಎಲ್ಲೂ ಗೋಮಾಂಸ ಮಾರುಕಟ್ಟೆ ಇಲ್ಲ. ಮೇದಾರಗಲ್ಲಿಯ ಹಿಂದಿನ ಕಸಾಯಿಗಲ್ಲಿಯ ರಸ್ತೆಯ ಮಧ್ಯೆ ಇರುವ ದನದ ಮಾಂಸ ಮಾರುಕಟ್ಟೆಯ ಕಟ್ಟಡ ಶತಮಾನಗಳಿಂದ ಇದ್ದು ಅದನ್ನು ತೆರವುಗೊಳಿಸುವ ಪ್ರಶ್ನೆàಯೇ ಇಲ್ಲ ಎಂದರು. ಪುರಸಭೆ ಮಾಜಿ ಉಪಾಧ್ಯಕ್ಷ ಉಮೇಶ ಬೊಳಶೆಟ್ಟಿ, ನಾಮನಿರ್ದೇಶಿತ ಸದಸ್ಯ ಅನಿಲ ಫರ್ನಾಂಡಿಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next