Advertisement
ಪಾಕಿಸ್ಥಾನ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಲಿಯಾಮ್ ಪ್ಲಂಕೆಟ್ ಚೆಂಡನ್ನು ಬೆರಳಿನಿಂದ ತಿಕ್ಕಿ ಉಜ್ಜಿ ವಿರೂಪಗೊಳಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಚೆಂಡಿನ ಒಂದು ಬದಿಯ ಚರ್ಮ ಕಿತ್ತು ಹೋಗಿದ್ದು ಕೂಡಾ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯವನ್ನು ಕಂಡು ಅಭಿಮಾನಿಗಳು ಈ ಘಟನೆಯ ಕುರಿತು ತನಿಖೆ ನಡೆಸಬೇಕೆಂದು ಐಸಿಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು.
ಸ್ಪಷ್ಟನೆ ನೀಡಿದ ಐಸಿಸಿ: ಈ ವಿವಾದದ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಐಸಿಸಿ, ಲಿಯಾಮ್ ಪ್ಲಂಕೆಟ್ ಬಾಲ್ ವಿರೂಪಗೊಳಿಸಿದ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗಿದೆ. ಆರೋಪವನ್ನು ಸಾಬೀತುಗೊಳಿಸುವ ಬಗ್ಗೆ ನಮಗೆ ಯಾವುದೇ ಅಗತ್ಯ ಸಾಕ್ಷಿ ಲಭ್ಯವಾಗಿಲ್ಲ ಎಂದಿದೆ.
Related Articles
Advertisement
ದ್ವಿತೀಯ ಏಕದಿನ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ 12 ರನ್ ಗಳಿಂದ ಗೆದ್ದಿತ್ತು. ಲಿಯಾಮ್ ಪ್ಲಂಕೆಟ್ ಒಂಬತ್ತು ಓವರ್ ಗಳಲ್ಲಿ 64 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು.