Advertisement
ಶಾಲೆಯಿಂದ ಸುಮಾರು 6 ಕಿ.ಮೀ. ದೂರದ ಕಣಿಯಾರು ಕಾಡಿಗೆ 8 ಹಾಗೂ 9ನೇ ತರಗತಿ ವಿದ್ಯಾರ್ಥಿಗಳನ್ನು ಹೊರ ಸಂಚಾರಕ್ಕೆ ಕರೆದೊಯ್ಯಲಾಗಿತ್ತು. ಕಾಡಿನ ಮಧ್ಯೆ ಶತಮಾನಗಳಷ್ಟು ಹಳೆಯದಾದ ಬೃಹತ್ ಮರವೊಂದನ್ನು ವೀಕ್ಷಿಸುವುದು ಇದರ ಉದ್ದೇಶವಾಗಿತ್ತು. ಅರಣ್ಯ ಇಲಾಖೆ ಸಿಬಂದಿ ಶಂಕರ್ ಅವರ ನೇತೃತ್ವದಲ್ಲಿ ಸಾಗಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಕಾಡಿನ ಸಹಜ ಸೌಂದರ್ಯವನ್ನು ಸವಿಯುತ್ತಾ 11 ಗಂಟೆ ಸುಮಾರು ಆ ಮರದ ಬಳಿ ತಲುಪಿದರು. ಇಷ್ಟೊಂದು ದೊಡ್ಡ ಗಾತ್ರದ ಮರವನ್ನು ನೋಡಿ ಅಚ್ಚರಿ ಪಡುತ್ತಲೇ ತಾವು ತಂದ ತಿಂಡಿ-ತಿನಿಸುಗಳನ್ನು ಸವಿದು ದಣಿವಾರಿಸಿಕೊಂಡರು. ಕಾಡುಬಳ್ಳಿಗಳಲ್ಲಿ ಜೀಕಿ ಖುಷಿಪಟ್ಟರು. ಮಧ್ಯಾಹ್ನದ ವೇಳೆ ಎಲ್ಲರೂ ಮರಳಿ ಶಾಲೆಗೆ ತಲುಪಿದರು.
ಕಣಿಯಾರು ಕಾಡಿನಲ್ಲಿದ್ದ ಬೃಹತ್ ಮರವನ್ನು ವಿದ್ಯಾರ್ಥಿಗಳು ಪರಸ್ಪರ ಕೈಗಳನ್ನು ಜೋಡಿಸಿ ಸುತ್ತುವರಿದರು. ಒಟ್ಟು 24 ವಿದ್ಯಾರ್ಥಿಗಳ ಕೈಗಳು ಜೋಡಿದ ಮೇಲೆ ಕಾಂಡವನ್ನು ಸುತ್ತುವರಿಯಲು ಸಾಧ್ಯವಾಯಿತು. ಸಮೀಪದಲ್ಲೇ ಇದೇ ಜಾತಿಯ ವಿಶಾಲ ಮರಗಳೂ ಇದ್ದವು. ಈ ಮರದ ಕಾಂಡದ ಬಾಗಿದ ರಚನೆಯ ನಡುವೆ ಒಂದು ಕೊಠಡಿಯಷ್ಟು ಜಾಗ ಇರುವುದು ವಿಶೇಷ.
Related Articles
Advertisement