Advertisement

ಯುನೈಟೆಡ್‌ ಕಿಂಗ್‌ಡಮ್‌ ಸಂಸತ್ತಿನ ಒಳಗೆ ಮಕ್ಕಳಿಗೆ ನಿಷೇಧಕ್ಕೆ ಭಾರೀ ಆಕ್ರೋಶ

08:33 PM Nov 24, 2021 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ ಸಂಸತ್ತಿನ ಒಳಗೆ ಸಚಿವರು ಅಥವಾ ಸಂಸದರು ಮಕ್ಕಳನ್ನು ಕರೆತರುವಂತಿಲ್ಲ ಎನ್ನುವ ಹೊಸ ನಿಯಮ ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್‌ನಿಂದಲೇ ಈ ನಿಯಮ ಜಾರಿಗೊಳಿಸಲಾಗಿದೆ. ಹೊಸ ನಿಯಮದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ಲೇಬರ್‌ ಪಾರ್ಟಿಯ ನಾಯಕಿ ಸ್ಟೆಲ್ಲಾ ಕ್ರೀಸಿ ಇತ್ತೀಚೆಗೆ ತಮ್ಮ 3 ತಿಂಗಳ ಮಗುವನ್ನು ಸಂಸತ್ತಿನೊಳಗೆ ಕರೆದುಕೊಂಡು ಹೋಗಿದ್ದರು. ಅದಕ್ಕೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ದೂರಿದ್ದಾರೆ.

“ಈ ಹಿಂದೆ ನನ್ನ ದೊಡ್ಡ ಮಗಳನ್ನೂ ಕರೆದುಕೊಂಡು ಹೋಗಿದ್ದೆ. ಆಗ ಇಲ್ಲದ ನಿಯಮ ಈಗ ಜಾರಿಯಾಗಿದೆ.ಇದರಿಂದಾಗಿ ನಮ್ಮಂತಹ ತಾಯಿಯರನ್ನು ಸಂಸತ್ತಿನಿಂದ ದೂರವಿರುವಂತಾಗುತ್ತದೆ. ಕೂಡಲೇ ಈ ನಿಯಮ ತೆಗೆದುಹಾಕಬೇಕೆಂದು’ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಸುಬ್ರಹ್ಮಣ್ಯ; ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ರಸ್ತೆಯಲ್ಲೇ ಹೊತ್ತಿ ಉರಿದ ಕಾರು

Advertisement

Udayavani is now on Telegram. Click here to join our channel and stay updated with the latest news.

Next