Advertisement
ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣ ಅಭಿವೃದ್ಧಿಗೆ ತಾವೇ ಕಾರಣ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿದೆ ಎಂಬ ಕಾರ್ಯಕರ್ತರ ಆತಂಕಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, “ಯೋಗೇಶ್ವರ್ ಈ ಹಿಂದೆ ಕಾಂಗ್ರೆಸ್ ಸಹ ಸದಸ್ಯನಾಗಿದ್ದರಿಂದ ಈ ಬಗ್ಗೆ ಮೌನವಾಗಿದ್ದೆ. ಈಗ ಅವರು ಬಿಜೆಪಿ ಸೇರಿದ್ದಾರೆ. ಆದರೆ, ಅವರು ಕ್ಷೇತ್ರದಲ್ಲಿ ಏನೇ ಕೆಲಸ ಮಾಡಿದ್ದರೂ ಸ್ವಂತ ಹಣದಿಂದ ಮಾಡಿದ್ದಲ್ಲ, ಸರ್ಕಾರದ ಅನುದಾನದಿಂದ. ಡಿ. 12ರಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಚನ್ನಪಟ್ಟಣಕ್ಕೆ ಬರುತ್ತಿದ್ದೇನೆ. ಅಲ್ಲಿ ಸರ್ಕಾರದ ಕೊಡುಗೆಗಳನ್ನು ಯೋಗೇಶ್ವರ್ ಮುಂದೆಯೇಹೇಳುತ್ತೇನೆ’ ಎಂದು ಭರವಸೆ ನೀಡಿದರು.