Advertisement
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೂಪಾ ಪ್ರಕಾಶನದ ಆಶ್ರಯದಲ್ಲಿ ಪರ್ತಕರ್ತ ಅಂಶಿ ಪ್ರಸನ್ನ ಕುಮಾರ್ ಅವರ ಸಮುದಾಯ ನಾಯಕರು ಮತ್ತು ಸಮಾಜಮುಖೀ ಶ್ರೀ ಸಾಮಾನ್ಯರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ನಾನು ಮಾಧ್ಯಮಗಳನ್ನು ಅತ್ಯಂತ ಹತ್ತಿರಕ್ಕೆ ತೆಗೆದು ಕೊಂಡಿದ್ದೆ. ಆದರೆ, ಇತ್ತೀಚೆಗೆ ಮಾಧ್ಯಮಗಳನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮದ ಕೆಲವರು ಪ್ಯಾನಲ್ ಚರ್ಚೆ ಮಾಡುತ್ತಾ, ಅವರೇ ಈ ಭೂಮಿ ಮೇಲೆ ಎಲ್ಲವನ್ನು ಜವಾಬ್ದಾರಿ ಹೊತ್ತಿರುವವರಂತೆ ಮಾತನಾಡುತ್ತಾರೆ ಎಂದು ಮಾಧ್ಯಮದವರ ವಿರುದ್ಧ ಗರಂ ಆದರು.
ಟಿಆರ್‌ಪಿಗೆ ನಮ್ಮ ಬಳಕೆ: ನಿಮ್ಮ ಟಿಆರ್‌ಪಿಗಾಗಿ ನಮ್ಮನ್ನು ಬಳಸಿಕೊಳ್ತಿದ್ದಿರಾ. ಮಾಧ್ಯಮಗಳ ಮೇಲೆ ನಾನು ಕಾಯಿದೆ ಮಾಡುವ ಚಿಂತೆಯಿದೆ. ರಾಜಕಾರಣಿಗಳು ಅಂದ್ರೆ ಏನ್ ಅನ್ಕೊಂಡಿದ್ದೀರಾ ನೀವು ? ಅದ್ಯಾವೊª ಕಾಮಿಡಿ ಪ್ರೋಗ್ರಾಮ್ ಕಿಲ ಕಿಲ, ಕೇಳ್ರಪ್ಪೊ ಕೇಳಿ ಅಂತ ಅನ್ಕೊಂಡು ರಾಜಕಾರಣಿಗಳನ್ನು ನಿಮಗೆ ಬೇಕಾದಹಾಗೆ ತೋರಿಸುತ್ತಿದ್ದೀರಾ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು?
ಅದ್ರಲ್ಲೂ ಎಲ್ಲಿದ್ದಿಯಪ್ಪಾ ನಿಖೀಲ್ ಅಂತ ಅರ್ಧ ಗಂಟೆ ಕಾರ್ಯಕ್ರಮ ಬೇರೆ ಎಂದು ದೃಶ್ಯ ಮಾಧ್ಯಮದವರ ಮೇಲೆ ಹರಿಹಾಯ್ದು, ಮಾಧ್ಯಮದವರು ಕೇವಲ ನಮ್ಮ ಬಗ್ಗೆ ಸ್ಟೋರಿ ಮಾಡುವುದನ್ನು ಬಿಟ್ಟು, ಜನಪರ ಕಾರ್ಯಕ್ರಮಗಳನ್ನು ಮಾಡಿ. ನಾನು ವರದಿಗಾರರ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಸಂಪಾದಕರಿಗೆ ಹೇಳ್ತಿನಿ. ನಡೆಸೊಕ್ಕೆ ಆಗಿಲ್ಲ ಅಂದ್ರೆ ನಿಮ್ಮ ಚಾನೆಲ್‌ಗಳ ಬಾಗಿಲು ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋಲಿಗೆ ಹೆದರಲ್ಲ: ಎಲೆಕ್ಟ್ರಾನಿಕ್ ಮಾಧ್ಯಮದವರು ಊಹೇ ಮಾಡಿಕೊಂಡು ಸುದ್ದಿ ಮಾಡ್ತಿರಾ. ಸಮಾಜವನ್ನು ಹಾಳು ಮಾಡುವ ಕೆಲಸ ಮಾಡ್ತಿದ್ದೀರಾ, ನಾನು ಮಾಧ್ಯಮಗಳ ಕಡೆ ಮುಖ ಮಾಡೋಲ್ಲ. ಅದೇನ್ ಮಾಡ್ತಿರೋ ಮಾಡ್ಕೊಳಿ ಎಂದು ಹೇಳಿ, ಮಗ ನಿಖೀಲ್ ಸೋಲಿನಿಂದ ನಾನು ಮೀಡಿಯಾಗಳ ಬಳಿ ಹೋಗ್ತಿಲ್ಲ ಅಂತ ಹೇಳ್ತಾರೆ.
ಗ್ರಾಮ ಪಂಚಾಯತಿಯಿಂದ ಪ್ರಧಾನಿಯವರೆಗೂ ಹೋಗಿರುವ ಕುಟುಂಬ ನಮ್ಮದು. ಸೋಲು, ಗೆಲುವುಗಳಿಗೆ ಹೆದರುವ ಕುಟುಂಬ ನನ್ನದಲ್ಲ. ನಾನು ಮೀಡಿಯಾದರಿಂದ ಏನೂ ಅಧಿಕಾರಕ್ಕೆ ಬಂದಿಲ್ಲ ಎಂದು ನೇರವಾಗಿ ಮಾಧ್ಯಮಗಳ ವಿರುದ್ಧ ವಾಗ್ಧಾಳಿ ನಡೆಸಿದರು.
ಹೊಣೆ ಅರಿತು ಕೆಲಸ ಮಾಡಿ: ಕೊಡಗಿನಲ್ಲಾದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ವೆಚ್ಚದಲ್ಲಿ 800 ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಜೊತೆಗೆ ಮತ್ತೆ ಅತೀವೃಷ್ಟಿಯಂತಹ ಅನಾಹುತಗಳು ಆಗದಂತೆ ಅಧಿಕಾರಿಗಳ ಸಭೆ ನಡೆಸಿ, ಮುಂಜಾಗೃತೆ ವಹಿಸಲಾಗಿದೆ. ಆದರೆ, ಈ ಬಗ್ಗೆ ಯಾವ ಮಾಧ್ಯಮದವರೂ ಹೇಳುವುದಿಲ್ಲ. ನಾಡನ್ನು ಕಟ್ಟಲು ನಮ್ಮಷ್ಟೇ ನಿಮಗೂ ಜವಾಬ್ದಾರಿ ಇದೆ. ಅದನ್ನು ಅರಿತು ಕೆಲಸ ಮಾಡಬೇಕು ಎಂದರು.
ಸುದ್ದಿ ತಿರುಚಬೇಡಿ: ಚಿಂಚೋಳ್ಳಿಯಲ್ಲಿ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂದು ನಾನು ನೀಡಿದ್ದ ಹೇಳಿಕೆಯನ್ನು ಮಾಧ್ಯಮದವರು ತಿರುಚಿ, ಅದನ್ನ ಸಿದ್ದರಾಮಯ್ಯ ಹಾಗೂ ಖರ್ಗೆ ನಡುವೆ ತರುವ ಯತ್ನ ಅಂತ ಸ್ಟೋರಿ ಮಾಡಿದರು.
ಇಂದು ಬೆಳಗ್ಗೆ ಸಚಿವ ಪುಟ್ಟರಂಗಶೆಟ್ಟಿ ಅವರು ಸಿಎಂ ಸ್ಥಾನದಲ್ಲಿ ಎಚ್.ಡಿ. ಕುಮಾರಸ್ವಾಮಿ ಇದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಆ ಸ್ಥಾನದಲ್ಲಿ ಇಟ್ಟು ನೋಡುತ್ತೇನೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ? ಅವರು ಸಿದ್ದರಾಮಯ್ಯ ನೆರಳಲ್ಲಿ ಬೆಳೆದು ಬಂದವರು. ಹಾಗಾಗಿ ಆ ರೀತಿ ಹೆಳಿದ್ದಾರೆ. ಅದನ್ನು ನಿಮ್ಮಿಷ್ಟ ಬಂದಂತೆ ಟಿಆರ್‌ಪಿಗಾಗಿ ಏಕೆ ಬಳಕೆ ಮಾಡಿಕೊಳ್ಳುತ್ತೀರಾ ? ಎಂದು ಗುಡುಗಿದರು.
ಚಿತ್ರ ಹಿಂಸೆ: ಕಳೆದ ಮೂರೂವರೆ ತಿಂಗಳಿನಿಂದ ನನ್ನ ನೆಮ್ಮದಿ ಹಾಳು ಮಾಡಿದ್ದೀರಿ, ಒಂದು ರೀತಿ ಚಿತ್ರಹಿಂಸೆ ನೀಡಿದ್ದೀರಿ. ಸರಕಾರ ಬಿಧ್ದೋಗುತ್ತೆ ಅಂತ ವರದಿ ಮಾಡ್ತೀರಾ. ಈ ಸರ್ಕಾರಕ್ಕೆ ಸಂಕಷ್ಟ ಇದೆ ಅಂತೀರಾ, ಆದರೆ ಈ ಸರ್ಕಾರ ಈಗಲೂ ನಡೆಯುತ್ತಿರುವುದು ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಎಂದು ಹೇಳಿದರು.
ನಾವು ಹೋದರೆ ಟೆಂಪಲ್ ರನ್, ಮೋದಿ ಹೋದರೆ ಸುಮ್ನಿರ್ತೀರಾ: ನಾವು ದೇವರ ಭಕ್ತರು, ದೇಸ್ತಾನಗಳಿಗೆ ಹೋಗ್ತಿವಿ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಾವು ದೇವಸ್ತಾನಗಳಿಗೆ ಹೋದರೆ ಚುನಾವಣೆಗಾಗಿ ಟೆಂಪಲ್ ರನ್ ಅಂತಿರಾ. ನರೇಂದ್ರ ಮೋದಿ ಕೇದಾರನಾಥ, ಬದರಿನಾಥದಲ್ಲಿ ಈಶ್ವರನ ತಪಸ್ಸು ಮಾಡಿದರೆ ಏನು ಇಲ್ಲ. ಮೇ 23 ಬಳಿಕ ವರ ಖುರ್ಚಿ ಅಳ್ಳಾಡುತ್ತೆ ಅಂತ ಹೋಗಿ ತಪಸ್ಸಿಗೆ ಕೂತ್ಕೊಂಡಿರೋದು ಎಂದು ವ್ಯಂಗ್ಯವಾಡಿದರು.