Advertisement
ರಾಹುಲ್ ಗಾಂಧಿಯವರ ಬಗ್ಗೆ ಮಾತನಾಡಿದ ಪವಾರ್ “ಭಾರತ್ ಜೋಡೋ ಯಾತ್ರೆಯನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದಲ್ಲ ಒಂದು ದಿನ ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸಲಿದ್ದಾರೆ’ ಎಂದರು.
2019ರಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವುದಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬೆಂಬಲ ಇತ್ತು ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮುಂಬೈನಲ್ಲಿ ಮಾತನಾಡಿದ ಅವರು, 2019ರಲ್ಲಿ ಶರದ್ ಪವಾರ್ ಬಿಜೆಪಿ ಜತೆಗೆ ಸೇರಿಕೊಂಡು ಸರ್ಕಾರ ರಚಿಸಲು ಮುಂದಾಗಿದ್ದರು. ಜತೆಗೆ ಯಾರಿಗೆ ಯಾವ ಖಾತೆ ಎಂಬ ಅಂಶವೂ ತೀರ್ಮಾನವಾಗಿತ್ತು. ಅಂತಿಮವಾಗಿ ಪವಾರ್ ನಿಲುವು ಬದಲಾಯಿಸಿಕೊಂಡರು ಎಂದು ಹೇಳಿದ್ದಾರೆ.