Advertisement

ಡಿ. 9 ರ ನಂತರ ಯಾವುದೇ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳಲ್ಲ: ಎಚ್.ಡಿ. ದೇವೇಗೌಡ

04:10 PM Dec 02, 2019 | Suhan S |

ಬೆಳಗಾವಿ: ಡಿ. 9ರ ನಂತರ ಯಾವುದೇ ಪಕ್ಷದ ಜತೆಗೆ ಮೈತ್ರಿ‌ ಇಲ್ಲ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಸಂಕಷ್ಟ ಅನುಭವಿಸಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.

Advertisement

ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಹೇಗೆ ಬಿತ್ತು ಎಂಬುದು ನನಗೆ ಗೊತ್ತು. ನಾವು ಯಾರ ಜತೆಗೆ ಸೇರುವುದಿಲ್ಲ, ಪಕ್ಷ ಕಟ್ಟಿಕೊಳ್ಳುತ್ತೇವೆ ಅಂದರೆ ಸರ್ಕಾರ ಹೋಗುತ್ತಾ. ಸಿದ್ದರಾಮಯ್ಯ, ಕಾಂಗ್ರೆಸ್ ನಾವು ಒಟ್ಟಾಗದಿದ್ದರೆ ಸರ್ಕಾರ ಹೇಗೆ ಬೀಳುತ್ತೆ. ಬಿಜೆಪಿಯವರ ಬಳಿ 105 ಸೀಟ್ ಇವೆ. ನಾವು ಯಾರ ಜತೆಗೂ ಸೇರಲ್ಲ ಅಂದ್ರೆ ಸರ್ಕಾರ ಹೋಗುತ್ತಾ ಎಂದರು.

ಬಿಜೆಪಿ ಮತ್ತು ಕಾಂಗ್ರೆಸ್ ಯಾವುದಕ್ಕೂ ನಾವು ಬೆಂಬಲ ನೀಡುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ನಾವು ಕುಳಿತುಕೊಳ್ಳುತ್ತೇವೆ. ಈಗಾಗಲೇ ಬೆಂಬಲ ನೀಡಿದ್ದಕ್ಕೆ ನಮಗೆ ಸಾಕಾಗಿ ಹೋಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಸರ್ಕಾರ ಮಾಡಿದ್ದು ಹೊಸ ಪ್ರಯೋಗ. ಐದು ವರ್ಷ ಸರ್ಕಾರ ಸುಭದ್ರವಾಗಿ‌ ನಡೆಯುತ್ತಿದೆಯಾ ಎಂಬುದನ್ನು ಕಾದು ನೋಡಬೇಕಿದೆ ಎಂದು ದೇವೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next