Advertisement
ದಕ್ಷಿಣ ಕೊರಿಯಾದ ಏಷ್ಯನ್ ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಪಾಲಿಸಿ (ಎಎಸ್ಎಪಿ) ಮತ್ತು ಎಂ ಎಸ್ ರಾಮಯ್ಯ ಯೂನಿವರ್ಸಿಟಿ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಜೊತೆಗೂಡಿ ಭಾರತೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ 12ನೇ ವರ್ಷದ ಸಮಾವೇಶವನ್ನು ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.
Related Articles
Advertisement
ಉದ್ಯಮಗಳ ಬೆಳವಣಿಗೆಗೆ ಸಹಭಾಗಿತ್ವ ಮತ್ತು ಪಾಲುದಾರಿಕೆ ಅತ್ಯಗತ್ಯವಾಗಿವೆ. ಇದಕ್ಕಾಗಿ ಸರಕಾರವು ಹಲವು ನೀತಿಗಳನ್ನು ಜಾರಿಗೆ ತಂದಿದೆ ಎಂದು ಅವರು ಪ್ರತಿಪಾದಿಸಿದರು.
ಕರ್ನಾಟಕವು ಇಡುತ್ತಿರುವ ಹೆಜ್ಜೆಗಳು ಇಂದು ರಾಷ್ಟ್ರೀಯ ಮಾದರಿಗಳಾಗುತ್ತಿವೆ. ಹಲವು ರಾಜ್ಯಗಳು ಇನ್ನೂ ಚಿಂತನೆಯನ್ನು ಮಾಡದೆ ಇರುವಾಗ ನಾವು ಸ್ಪಷ್ಟ ನೀತಿಗಳೊಂದಿಗೆ ಹೊರಬರುತ್ತಿದ್ದೇವೆ. ಇದರಿಂದ ರಾಜ್ಯವು ನಾವೀನ್ಯತೆ ಮತ್ತು ಸಮರ್ಥ ನೀತಿಗಳ ತೊಟ್ಟಿಲಾಗಿದೆ ಎಂದು ಸಚಿವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೊರಿಯಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷ ಡಾ.ಜೇಸೂ ಕಿಮ್, ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಪ್ರಹ್ಲಾದ್ ರಾಮರಾವ್, ಡಾ.ಬಾಲಸುಬ್ರಹ್ಮಣ್ಯಂ, ಎಎಸ್ಐಪಿ ಅಧ್ಯಕ್ಷ ಯಂಗ್ ಜೂ ಕೂ, ಅತುಲ್ ಬಾತ್ರಾ ಮುಂತಾದವರು ಉಪಸ್ಥಿತರಿದ್ದರು.