Advertisement

ಬ್ಯಾಂಕ್‌ನ ನೂತನ ಕಾರ್ಯಾಧ್ಯಕ್ಷೆಯಾಗಿ ಹಿಮಾಂಗಿ ನಾಡಕರ್ಣಿ ನೇಮಕ

11:28 AM Mar 09, 2022 | Suhan S |

ಮುಂಬಯಿ: ಎನ್‌ಕೆಜಿಎಸ್‌ಬಿ ಕೋ – ಆಪರೇಟಿವ್‌ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಆಯ್ಕೆಗೆ ಫೆ. 27ರಂದು ನಡೆದ ಚುನಾವಣೆಯಲ್ಲಿ ಬ್ಯಾಂಕ್‌ನ ಸದಸ್ಯರು ಬದಲಾವಣೆಯ ಪರವಾಗಿ ಮತ ಚಲಾಯಿಸಿದ್ದಾರೆ.

Advertisement

ಆಯ್ಕೆಯಾದ ಹೊಸ ನಿರ್ದೇಶಕ ಮಂಡಳಿಯಲ್ಲಿ  ಬ್ಯಾಂಕಿಂಗ್‌, ಹಣಕಾಸು, ಮಾನವ ಸಂಪನ್ಮೂಲ, ಕಾನೂನು ಕ್ಷೇತ್ರದ ತಜ್ಞರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ಮಹಿಳಾ ನಿರ್ದೇಶಕರು ಆಯ್ಕೆಯಾಗಿರುವುದು ಉತ್ತಮ ಬೆಳೆವಣಿಗೆಯಾಗಿದೆ. ಹಿಮಾಂಗಿ ನಾಡಕರ್ಣಿ ಅವರು ಎನ್‌ಕೆಜಿ ಎಸ್‌ಬಿ ಕೋ – ಆಪರೇಟಿವ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಬ್ಯಾಂಕ್‌ನ 104 ವರ್ಷಗಳ ಇತಿಹಾಸದಲ್ಲಿ  ಮೊದಲ ಬಾರಿಗೆ ಮಹಿಳೆಯೊಬ್ಬರು ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ  ಭಾರತದ ಅಗ್ರಮಾನ್ಯ ಸಹಕಾರಿ ಬ್ಯಾಂಕ್‌ ಮಹಿಳೆಯರ ಸಾಧನೆಗೆ ಗರಿ ಮೂಡಿಸಿದಂತಾಗಿದೆ. ಚಾರ್ಟರ್ಡ್‌ ಅಕೌಂಟೆಂಟ್‌ ಆಗಿರುವ ಹಿಮಾಂಗಿ ನಾಡಕರ್ಣಿ ಅವರು 30 ವರ್ಷಗಳ ಕಾಲ ಅಗ್ರಮಾನ್ಯ ಸಹಕಾರಿ ಬ್ಯಾಂಕ್‌ಗಳಲ್ಲಿ ಉನ್ನತ ಸಾœನಗಳನ್ನು ಅಲಂಕರಿಸಿ ಅಪಾರ ಅನುಭವ ಪಡೆದಿದ್ದಾರೆ. ಇನ್ನೋರ್ವ ಹೊಸ ಮುಖ ಕಿರಣ್‌ ಅಣ್ಣಪ್ಪ ಕಾಮತ್‌ ಅವರು ಮೊದಲ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮುಂಬಯಿಯಲ್ಲಿ  ಪ್ರಧಾನ ಕಾರ್ಯಾಲಯ ಹೊಂದಿರುವ ಎನ್‌ಕೆಜಿಎಸ್‌ಬಿ ಕೋ-ಆಪರೇಟಿವ್‌ ಬ್ಯಾಂಕ್‌ 104 ವರ್ಷಗಳ ಸುದೀರ್ಘ‌ ಪರಂಪರೆ ಹೊಂದಿರುವುದಷ್ಟೇ ಅಲ್ಲದೆ ಭಾರತದ ಅಗ್ರಮಾನ್ಯ 10 ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಬ್ಯಾಂಕ್‌ನ ನೂತನ ನಿರ್ದೇಶಕರಾಗಿ ಶಶಾಂಕ್‌ ಗುಲ್‌ಗ‌ುಲೆ, ಕಿರಣ್‌ ವಿಷ್ಣು ಕಾಮತ್‌, ವಸಂತ್‌ ಕುಲಕರ್ಣಿ, ಸಂದೀಪ್‌ ಪ್ರಭು, ಮಂಗಳಾ ಪ್ರಭು, ಡಾ| ಅನುಯಾ ವಾರ್ತೆ, ಶಾಂತೇಶ್‌ ವಾರ್ತೆ, ರಂಗನಾಥನ್‌ ಐಯ್ಯರ್‌, ನಿಲಂ ವಾರ್ತೆ, ಸಂತೋಷ್‌ ಸೋನಾವನೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next