Advertisement

ದುಬೈ: ಹೆಂಡತಿಯಿಂದ 20 ಸಾವಿರ ಸಾಲ ಪಡೆದು, 28.45 ಕೋ.ರೂ ಗೆದ್ದ ಕೃಷಿಕ

05:34 PM Aug 05, 2019 | Sriram |

ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು.

Advertisement

ಹೌದು ತೆಲಂಗಾಣದ ನಿಜಾಮಬಾದ್‌ನ ಜಾಕ್ರನ್ಪಳ್ಳಿ ಗ್ರಾಮಕ್ಕೆ ಸೇರಿದ ವಿಲಾಸ್‌ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ.

ಮೂಲತಃ ಕೃಷಿ ಕುಟುಂಬ. ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಚಾಲಕನಾಗಿ ವೃತ್ತಿ ಮಾಡುತ್ತಿದ್ದರು. ಬಳಿಕ ಸ್ವದೇಶಕ್ಕೆ ಹಿಂತಿರುಗಿ ಕೃಷಿ ಕಾರ್ಯ ಮಾಡುತ್ತಿದ್ದರು. ಆದರೆ ಹಲವು ಸಮಸ್ಯೆಯ ಕಾರಣಕ್ಕಾಗಿ ದುಬೈಯಲ್ಲಿ ಉದ್ಯೋಗ ಹುಡುಕುವ ಕನಸನ್ನು ಕಂಡಿದ್ದರು. ಇದಕ್ಕಾಗಿ 45 ವರ್ಷಗಳ ಹಿಂದೆ ದುಬೈ ತೆರಳಿದ್ದರು. ಆದರೆ ಕೆಲವು ದಿನಗಳ ಕಾಲ ಕೆಲಸವನ್ನು ಅರಸುತ್ತಾ ದುಬೈಯಲ್ಲೇ ಇದ್ದರು. ಆದರೆ ಕೆಲಸ ಎಲ್ಲಿಯೂ ಇವರ ಕೈ ಹಿಡಿಯಲಿಲ್ಲ.

ಉಪಾಯ ಇಲ್ಲದೆ ಹೆಂಡತಿ ಪದ್ಮ ಅವರಿಂದ 20 ಸಾವಿರ ಪಡೆದು 3 ಅದೃಷ್ಟ ಕೂಪನ್ “ರಾಫೆಲ್’ ಅನ್ನು ಪಡೆಯಲು ಆಸಕ್ತಿ ಹೊಂದುತ್ತಾರೆ. ಇದರ ಸಲುವಾಗಿ ಅಬುದಾಬಿಯಲ್ಲಿ ಕೆಲಸದಲ್ಲಿರುವ ಗೆಳೆಯ ರವಿ ಅವರಲ್ಲಿ ನೀಡಿದ್ದರು. ರವಿ ರಿಕ್ಕಳ ಅವರ ಹೆಸರಿನಲ್ಲಿ ಅದೃಷ್ಟ ಚೀಟಿ ಖರೀದಿಸಿದ್ದರು. ಬಳಿಕ ಇವರು ಮತ್ತೆ ಬರೀ ಕೈಯಲ್ಲಿ ಸ್ವದೇಶಕ್ಕೆ ಹಿಂದಿರುಗಿದ್ದರು.

ದುಬೈನ ಕರಾಳ ದಿನದ ನೆನಪು ಮರೆಯಾಗುವ ಸಮಯಕ್ಕೆ ಅದೃಷ್ಟ ಚೀಟಿ ಅವರ ಕೈ ಹಿಡಿದಿದೆ. 4.08 ಮಿಲಿಯನ್ ಡಾಲರ್ (ಅಂದರೆ 28.45 ಕೋ.ರೂ) ಅದೃಷ್ಟವನ್ನು ರಿಕ್ಕಳ ಅವರು ಬಾಚಿಕೊಂಡಿದ್ದಾರೆ. ಕೆಲಸ ಕೈಕೊಟ್ಟರೆ ಏನಾಯಿತು, ಅದೃಷ್ಟ ಕೈ ಕೊಡಲಿಲ್ಲ. ರಿಕ್ಕಳ ಮತ್ತು ಪತ್ನಿ ಪದ್ಮ ಅವರಿಗೆ 2 ಹೆಣ್ಣು ಮಕ್ಕಳಿದ್ದಾರೆ. ನನ್ನ ಈ ಸಂಭ್ರಮಕ್ಕೆ ನನ್ನ ಪತ್ಮಿಯೇ ಕಾರಣ ಎಂದು ರಿಕ್ಕಳ ಅವರು ಹೇಳಿದ್ದಾರೆ.ರಿಕ್ಕಳ ಅವರ ಈ ಯಶೋಗಾಥೆಯನ್ನು ಗಲ್ಫ್ ಪತ್ರಿಕೆಗಳು ವರದಿ ಮಾಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next