Advertisement

Niveus Mangaluru Marathon 2024: ನ.10ರಂದು ಬೆಳಗ್ಗೆ ವಾಹನ ಸಂಚಾರದಲ್ಲಿ ಬದಲಾವಣೆ

08:49 PM Nov 06, 2024 | Team Udayavani |

ಮಹಾನಗರ: ಮಂಗಳೂರು ರನ್ನರ್ ಕ್ಲಬ್‌ ವತಿಯಿಂದ ನ.10ರಂದು ಮಂಗಳೂರಿನಲ್ಲಿ “ನೀವಿಯಸ್‌ ಮಂಗಳೂರು ಮ್ಯಾರಥಾನ್‌-2024′ ನಡೆಯಲಿದ್ದು ಆ ಪ್ರಯುಕ್ತ ಅಂದು ಬೆಳಗ್ಗೆ 4 ರಿಂದ ಬೆಳಗ್ಗೆ 10 ಗಂಟೆಯವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

ಮ್ಯಾರಥಾನ್‌ನಲ್ಲಿ 5,000 ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದು ಓಟ ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣ ಗುರು ವೃತ್ತ (ಲೇಡಿಹಿಲ್‌), ಚಿಲಿಂಬಿ, ಉರ್ವ ಸ್ಟೋರ್‌, ಕೊಟ್ಟಾರ ಚೌಕಿ, ಕೋಡಿಕಲ್‌ ಕ್ರಾಸ್‌, ಕೂಳೂರು, ಕೆಐಒಸಿಎಲ್‌ ಜಂಕ್ಷನ್‌ ಮುಖಾಂತರ ಎನ್‌ಎಂಪಿಎ ಸರ್ವಿಸ್‌ ರಸ್ತೆಯಲ್ಲಿ ಸಾಗಿ ಡಿಕ್ಸಿ ಕ್ರಾಸ್‌ ನಲ್ಲಿ ಪಣಂಬೂರು ಬೀಚ್‌ ರಸ್ತೆಗೆ ತಿರುಗಿ ವಾಪಾಸ್ಸು ಡಿಕ್ಸಿ ಕ್ರಾಸ್‌, ಕೆಐಒಸಿಎಲ್‌ ಜಂಕ್ಷನ್‌ಗೆ ಬಂದು ತಣ್ಣೀರು ಬಾವಿ ಬೀಚ್‌ವರೆಗೆ ಹೋಗಿ ವಾಪಾಸ್ಸು ಕೊಟ್ಟಾರಚೌಕಿ, ಲೇಡಿಹಿಲ್‌ ಮುಖಾಂತರ ಮಂಗಳಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.

ಎಲ್ಲೆಲ್ಲಿ ಸಂಚಾರ ನಿಷೇಧ:
– ಮಣ್ಣಗುಡ್ಡೆ ಕಡೆಯಿಂದ ನಾರಾಯಣ ಗುರು ವೃತ್ತದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
– ಉರ್ವ ಮಾರ್ಕೆಟ್‌ನಿಂದ ನಾರಾಯಣ ಗುರು ವೃತ್ತದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
– ಕೆ.ಎಸ್‌.ಆರ್‌.ಟಿ.ಸಿ ಯಿಂದ ಲಾಲ್‌ಬಾಗ್‌ ಮುಖಾಂತರ ನಾರಾಯಣ ಗುರು ವೃತ್ತದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಿದೆ.
– ನಾರಾಯಣ ಗುರು ವೃತ್ತದಿಂದ ಕೊಟ್ಟಾರಚೌಕಿವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
– ಕೊಟ್ಟಾರ ಚೌಕಿಯಿಂದ ಕೋಡಿಕಲ್‌ ಕ್ರಾಸ್‌ ಕಡೆಗೆ ಸಾಗುವ ಸರ್ವಿಸ್‌ ರಸ್ತೆಯಲ್ಲಿ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
– ಕೋಡಿಕಲ್‌ ಕ್ರಾಸ್‌ ನಿಂದ ಕೂಳೂರು ಹೊಸ ಸೇತುವೆವರೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
– ತಣ್ಣೀರುಬಾವಿ ಬಾವಿ ಬೀಚ್‌ ರಸ್ತೆಯಲ್ಲಿ ತಣ್ಣೀರು ಬಾವಿ ಬೀಚ್‌ವರೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.
– ಓಟ ಸಾಗುವ ಮಾರ್ಗದಲ್ಲಿನ ಎಡ ಭಾಗದಲ್ಲಿರುವ ಎಲ್ಲಾ ಅಡ್ಡ ರಸ್ತೆಗಳಿಂದ ವಾಹನಗಳು ಮ್ಯಾರಥಾನ್‌ ಓಟ ಸಾಗುವ ಮುಖ್ಯ ರಸ್ತೆಗೆ ಬರುವುದನ್ನು ನಿಷೇಧಿಸಿದೆ.

ಬದಲಿ ಮಾರ್ಗಗಳು
– ಪಿ.ವಿ.ಎಸ್‌ ಕಡೆಯಿಂದ ನಾರಾಯಣ ಗುರುವೃತ್ತ ಕಡೆಗೆ ಸಂಚರಿಸುವ ವಾಹನಗಳು ಲಾಲ್‌ಬಾಗ್‌ – ಕೆ.ಎಸ್‌.ಆರ್‌.ಟಿ.ಸಿ ಮೂಲಕ ಸಂಚರಿಸಬೇಕು.
– ಕುದ್ರೋಳಿ ಮಣ್ಣಗುಡ್ಡೆ ಮತ್ತು ಉರ್ವ ಮಾರ್ಕೆಟ್‌ ನಿಂದ ನಾರಾಯಣ ಗುರು ವೃತ್ತ ಕಡೆಗೆ ಸಂಚರಿಸುವ ವಾಹನಗಳು ಮಣ್ಣಗುಡ್ಡೆ – ಬಲ್ಲಾಳ್‌ ಬಾಗ್‌ / ನೆಹರೂ ಅವಿನ್ಯೂ ರಸ್ತೆ – ಲಾಲ್‌ ಬಾಗ್‌ – ಕೆ.ಎಸ್‌.ಆರ್‌.ಟಿ.ಸಿ ಮೂಲಕ ಸಂಚರಿಸಬೇಕು.
– ಕೆ.ಎಸ್‌.ಆರ್‌.ಟಿ.ಸಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಬಿಜೈ ಕಾಪಿಕಾಡ್‌ ಕಡೆಯಿಂದ ಕುಂಟಿಕಾನ ಮುಖೇನ ಸಂಚರಿಸಬೇಕು.
– ಕೆ.ಪಿ.ಟಿ/ ಕುಂಟಿಕಾನ ಕಡೆಯಿಂದ ಉಡುಪಿ ಕಡೆಗೆ ಸಾಗುವ ವಾಹನಗಳು ಕೋಡಿಕಲ್‌ ಕ್ರಾಸ್‌ ಫ್ಲೈ ಓವರ್‌ ಬಳಿ ಬಲಕ್ಕೆ ತಿರುಗಿ ಕೂಳೂರು ಕೊಟ್ಟಾರ ಕ್ರಾಸ್‌ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಕೂಳೂರು ಹಳೇ ಸೇತುವೆ ಬಳಿಯ ಫ್ಲೈವರ್‌ ನ ಮುಕ್ತಾಯದಲ್ಲಿ ಎಡಕ್ಕೆ ತಿರುಗಿ ಕೂಳೂರು ಹೊಸ ಸೇತುವೆ ಮುಖೇನ ಕೆ.ಐ.ಓ.ಸಿ.ಎಲ್‌ ಮುಖಾಂತರ ಸಂಚರಿಸಬೇಕು.
– ಕಾವೂರು-ಪಂಜಿಮೊಗರು ಕಡೆಯಿಂದ ಬರುವ ಎಲ್ಲಾ ವಾಹನಗಳು ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಪಂಪ್‌ ಸರ್ವಿàಸ್‌ ರಸ್ತೆಯ ಮುಖಾಂತರ ಉಡುಪಿ ಕಡೆಗೆ ಸಂಚರಿಸಬೇಕು.
– ಅಶೋಕ ನಗರ, ಶೇಡಿಗುರಿ, ದಂಬೇಲ್‌, ಸುಲ್ತಾನ್‌ ಬತ್ತೇರಿ ಕಡೆಯಿಂದ ಬರುವ ವಾಹನಗಳು ಉರ್ವ ಮಾರ್ಕೆಟ್‌, ಮಣ್ಣಗುಡ್ಡೆ ಮುಖಾಂತರ ಸಂಚರಿಸಬೇಕು.

ಇದನ್ನೂ ಓದಿ: Haveri: ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next