Advertisement
ಡ್ರೈನೇಜ್ ಸಂಪರ್ಕ ಇಲ್ಲ!ಕಳೆದ 10 ವರ್ಷಗಳಿಂದ ಉಡುಪಿ ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ನಿಟ್ಟೂರು ವಾರ್ಡ್‌ನಲ್ಲಿ ಸಹ ವಾಣಿಜ್ಯ ಮಳಿಗೆ, ಸೇರಿದಂತೆ ಹತ್ತಾರು ಕಟ್ಟಡಗಳು ತಲೆ ಎತ್ತಿ ನಿಂತಿವೆ. ಆದರೆ ಹೊಸದಾಗಿ ನಿರ್ಮಾಣವಾದ ಶೇ. 50 ರಷ್ಟು ಕಟ್ಟಡಗಳು ನಗರಸಭೆಯಿಂದ ಡ್ರೈನೇಜ್ ಸಂಪರ್ಕ ಪಡೆಯದ ಹಿನ್ನೆಲೆಯಲ್ಲಿ ಮಳೆ ನೀರಿನ ಚರಂಡಿಗಳಿಗೆ ಮನೆ ಹಾಗೂ ಹೊಟೇಲ್‌ಗಳ ಕೊಳಚೆ ನೀರು ಹರಿ ಬಿಡಲಾಗುತ್ತಿದೆ. ಈ ಡ್ರೈನೇಜ್ ನೀರು ಬಾವಿಗೆ ಸೇರುತ್ತಿರುವುದರಿಂದ ಹನುಮಂತ ನಗರದ ಸುಮಾರು 10ಕ್ಕೂ ಅಧಿಕ ಮನೆಗಳ ಬಾವಿ ಹಾಳಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅರಿವಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವ ಆರೋಪಗಳಿವೆ.
ಪ್ರಸ್ತುತ ನಗರಸಭೆ ಅಧಿಕಾರಿಗಳು ಮೂಡುತೋಟದ ಸಮೀಪದಲ್ಲಿ ಕೊಳಚೆ ನೀರಿನ ಚರಂಡಿಯನ್ನು ದುರಸ್ತಿಗೊಳಿಸುತ್ತಿದ್ದಾರೆ. ಇದರಿಂದಾಗಿ ಕಲ್ಸಂಕದ ವೆಟ್‌ವೆಲ್‌ನಿಂದ ಸಂಪೂರ್ಣ ಕೊಳಚೆ ನೀರು ನೇರವಾಗಿ ತೋಡಿಗೆ ಹರಿ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ತೋಡಿನ ಮೂಲಕ ಕೊಳಚೆ ನೀರು ಗುಂಡಿಬೈಲ್, ಬನ್ನಂಜೆ, ನಿಟ್ಟೂರು, ಕೊಡವೂರು ಮಾರ್ಗವಾಗಿ ಅರಬಿ ಸಮುದ್ರವನ್ನು ಸೇರುತ್ತಿದೆ. ಕಾನೂನು ಉಲ್ಲಂಘನೆ
ಕೊಳಚೆ ನೀರನ್ನು ನೇರವಾಗಿ ಜಲ ಮೂಲಗಳಿಗೆ ಬಿಡಬಾರದು ಎನ್ನುವ ಕಾನೂನು ಇದೆ. ಆದರೂ ನಗರಸಭೆ ಅಧಿಕಾರಿಗಳು ಅದನ್ನು ಉಲ್ಲಂ ಸಿ ಕೊಳಚೆ ನೀರು ಜಲಮೂಲಕ್ಕೆ ಹರಿ ಬಿಡುತ್ತಿದ್ದಾರೆ. ಈ ಮಾರ್ಗವಾಗಿ ನೂರಾರು ಮನೆಗಳಲ್ಲಿ ಸಾವಿರಾರು ಜನರು ವಾಸವಾಗಿದ್ದಾರೆ. ಅವರೆಲ್ಲ ಈ ಕೊಳಚೆ ನೀರಿನ ಸಮಸ್ಯೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಡ್ರೈನೇಜ್ ಒಡೆದು ಹೋಗುವ ಘಟನೆಗಳು ಮರುಕಳಿಸುತ್ತಿವೆ. ಈ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದ್ದಾರೆ.
Related Articles
ನಿಟ್ಟೂರು ವಾರ್ಡ್‌ನಲ್ಲಿ ಕೆಲವು ವಾಣಿಜ್ಯ ಮಳಿಗೆ, ಮನೆಗಳಿಗೆ ಡ್ರೈನೇಜ್ ಸಂಪರ್ಕ ಸಿಕ್ಕಿಲ್ಲ. ಇದರಿಂದಾಗಿ ಆ ಮನೆಗಳ ನೀರು ಮಳೆ ನೀರಿನ ಚರಂಡಿಗೆ ಹರಿಯ ಬಿಡಲಾಗುತ್ತಿದೆ. ಇದರಿಂದಾಗಿ ಹನುಮಂತ ನಗರ ರಸ್ತೆಯ ಶೇ. 90ರಷ್ಟು ಬಾವಿಗಳ ನೀರು ಹಾಳಾಗಿದೆ.
Advertisement
ನೀರು ಬಳಸಲು ಹಿಂದೇಟುನಿಟ್ಟೂರು ವಾರ್ಡ್‌ನಲ್ಲಿ ಸುಮಾರು 30ರಿಂದ 40ರಷ್ಟು ಬಾವಿಗಳಲ್ಲಿ ವರ್ಷ ಪೂರ್ತಿ ನೀರಿದ್ದರೂ, ನಗರಸಭೆ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ. ಕೊಳಚೆ ನೀರು ಬಾವಿಗೆ ಸೇರುತ್ತಿರುವುದರಿಂದ ಬಾವಿ ನೀರು ಕಪ್ಪು ಹಾಗೂ ಹಳದಿ ಮಿಶ್ರಿತವಾಗಿದೆ. ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರಿಗೆ ಪೈಪೋಟಿ ನೀಡುವಷ್ಟು ಬಾವಿ ನೀರು ಹಾಳಾಗಿದೆ. ವರ್ಷಕ್ಕೊಮ್ಮೆ ಬಾವಿ ನೀರು ಖಾಲಿ ಮಾಡಿ ಔಷಧ ಸಿಂಪಡಿಸಿದರೂ ನೀರು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಮತ್ತೆ ಮರುಕಳಿಸುತ್ತಿದೆ. ಸಾಂಕ್ರಾಮಿಕ
ರೋಗಗಳು ಅಧಿಕ
ನಿಟ್ಟೂರು ವಾರ್ಡ್‌ನಲ್ಲಿ ವರ್ಷದಿಂದ ವರ್ಷಕ್ಕೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹನುಮಂತ ನಗರದ ನಿವಾಸಿಗಳು ಮಾರ್ಚ್ ನಿಂದ ಅಗಸ್ಟ್ ವರೆಗೆ ಮಲೇರಿಯಾ, ಡೆಂಗ್ಯೂ, ಜಾಂಡೀಸ್ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಳೆ ನೀರು ಚರಂಡಿ ಯಲ್ಲಿನ ಕೊಳಚೆ ನೀರು ಸಂಗ್ರಹದಿಂದ ಪರಿಸರ ದುರ್ನಾತ ದಿಂದ ಕೂಡಿದೆ. ಈ ಮಾರ್ಗವಾಗಿ ಜನರು ಸಂಚರಿಸಲು ಭಯಪಡುತ್ತಿದ್ದಾರೆ. ಹಳೆಯದನ್ನು ದುರಸ್ತಿ
ಅಮೃತ್ ಯೋಜನೆಯಲ್ಲಿ 38 ಕೋ.ರೂ. ಉಳಿದಿದೆ. ಇದೀಗ ಹೊಸ ಯುಜಿಡಿ ಸಂಪರ್ಕ ಮಾಡಲು ಸಾಧ್ಯವಿಲ್ಲ. ಹಳೆಯದನ್ನು ದುರಸ್ತಿ ಮಾಡುವ ಯೋಜನೆ ಯಿದ್ದು, ತತ್‌ಕ್ಷಣ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. -ಜಿ.ಜಗದೀಶ್, ಜಿಲ್ಲಾಧಿಕಾರಿ ಡಿಸಿ ಗಮನಕ್ಕೆ
ನಿಟ್ಟೂರು ವಾರ್ಡ್ ಡ್ರೈನೇಜ್ ಸಮಸ್ಯೆಗೆ ಸಂಬಂಧಿಸಿದಂತೆ ಎಂಪಿ, ಎಂಎಲ್‌ಎ, ಪೌರಯುಕ್ತ, ಜಿಲ್ಲಾಧಿಕಾರಿ ಗಳಿಗೆ ದೂರು ಹಾಗೂ ಸಮಸ್ಯೆಯ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಡ್ರೈನೇಜ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಮಾತ್ರ ಸಮಸ್ಯೆಯಿಂದ ಮುಕ್ತಿ ಸಿಗಲು ಸಾಧ್ಯ.
-ಸಂತೋಷ್, ನಿಟ್ಟೂರು ವಾರ್ಡ್
ನಗರಸಭೆ ಸದಸ್ಯ ಡ್ರೈನೇಜ್ ಸಂಪರ್ಕ ಸಿಕ್ಕಿಲ್ಲ
ನಿಟ್ಟೂರು ವಾರ್ಡ್‌ನಿಂದ ಬನ್ನಂಜೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿನ ಮ್ಯಾನ್ ಹೋಲ್‌ಗಳು ಉಕ್ಕಿ ಹರಿಯುತ್ತಿದೆ. ಈ ಮಾರ್ಗವಾಗಿ ಸಂಚರಿಸಲು ಕಷ್ಟವಾಗುತ್ತಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಶೀಘ್ರ ಇದಕ್ಕೊಂದು ಪರಿಹಾರ ಕಲ್ಪಿಸುವ ಅಗತ್ಯವಿದೆ.
-ರುದ್ರಪ್ಪ ಬಾವಿ ನೀರು ಸಂಪೂರ್ಣ ಹಾಳು
ಬಾವಿಯಲ್ಲಿ ನೀರಿದ್ದರೂ ಬಳಕೆ ಮಾಡಲು ಸಾಧ್ಯವಾಗು ತ್ತಿಲ್ಲ. ಮಳೆ ನೀರಿನ ಚರಂಡಿಗಳಲ್ಲಿ ಮನೆಗಳ ಕೊಳಚೆ ನೀರು ಹರಿಬಿಡ ಲಾಗುತ್ತಿದೆ. ಇದರಿಂದಾಗಿ ಬಾವಿ ನೀರು ಸಂಪೂರ್ಣವಾಗಿ ಹಾಳಾಗುತ್ತಿದೆ. ವರ್ಷಕ್ಕೊಮ್ಮೆ ನೀರು ಖಾಲಿ ಮಾಡಿ ಔಷಧ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
-ಈರಮ್ಮ ಶಾಶ್ವತ ಪರಿಹಾರ ಯಾವಾಗ
ತಿಂಗಳಿಗೊಮ್ಮೆ ನಿಟ್ಟೂರು ಎಸ್‌ಟಿಪಿಗೆ ಹೋಗುವ ಪೈಪ್‌ಗ್ಳು ಒಡೆದು ಹೋಗುತ್ತಿರುವುದರಿಂದ ಅಡ್ಕದ ಕಟ್ಟೆ ಮಾರ್ಗವಾಗಿ ಬನ್ನಂಜೆ, ಗುಂಡಿಬೈಲು, ಉಡುಪಿ, ಕಲ್ಸಂಕ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದಾಗ ಮಾತ್ರ ಸ್ಥಳೀಯರು ನೆಮ್ಮದಿಯಿಂದ ಇರಬಹುದಾಗಿದೆ.
-ಪ್ರಕಾಶ್ ನಾಗರಿಕ ಸಮಸ್ಯೆ ಇದ್ದರೆ ನಮಗೆ ತಿಳಿಸಿ
9148594259