Advertisement
ಈ ಸಮಸ್ಯೆಗೆ ಹಲವಾರು ವರ್ಷಗಳಿಂದ ಪರಿಹಾರವಾಗದೆ ಉಳಿದುಕೊಂಡಿದೆ. ನಿಟ್ಟೂರು, ಬನ್ನಂಜೆ ಮಾರ್ಗವಾಗಿ ಸಾಕಷ್ಟು ಮಂದಿ ನಿತ್ಯ ಪ್ರಯಾಣಿಸುತ್ತಾರೆ. ಈ ಭಾಗದ ಸಾರ್ವಜನಿಕರಿಗೂ ಕೊಳಚೆ ನೀರಿನ ಸಮಸ್ಯೆಯಿಂದ ಕಿರಿಕಿರಿಯಾಗುತ್ತಿದೆ. ಈ ಕೊಳಕು ನೀರಿನಲ್ಲಿ ಸೊಳ್ಳೆ ಸಹಿತ ನಾನ ಬಗೆಯ ಕ್ರಿಮೀಕೀಟಗಳು ಉತ್ಪತ್ತಿಯಾಗುತ್ತಿದ್ದು, ಪರಿಸರ ದುರ್ನಾತದಿಂದ ಕೂಡಿದೆ. ಸುತ್ತಮುತ್ತಲ ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಭಾಗದಲ್ಲಿ ಮ್ಯಾನ್‌ಹೋಲ್‌ನಿಂದ ನಿರಂತರವಾಗಿ ಒಳಚರಂಡಿ ನೀರು ಹುಕ್ಕಿ ಹರಿಯುತ್ತದೆ, ರಸ್ತೆ ಮೇಲೆ ಹರಡಿಕೊಂಡು, ಪಕ್ಕದ ಗದ್ದೆಯ ಮೇಲೆ ನೀರು ಹರಿಯು ತ್ತಿದೆ. ಗದ್ದೆಯ ಒಂದು ಒಳಚರಂಡಿ ನೀರು ದೊಡ್ಡ ಕೆರೆಯಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಈ ಸಮಸ್ಯೆಗೆ ಮುಕ್ತಿ ದೊರೆತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಹಳೆಯ ಕಾಲದ ಒಳಚರಂಡಿ ವ್ಯವಸ್ಥೆ ಇದಾಗಿದ್ದು, ವ್ಯವಸ್ಥಿತ ಮಾದರಿಯಲ್ಲಿ ಯುಜಿಡಿ ನಿರ್ಮಿಸಬೇಕು ಎಂಬುದು ನಾಗರಿಕರ ಒತ್ತಾಸೆ. ತ್ಯಾಜ್ಯ ರಾಶಿ ನಿರ್ಮಾಣ
ಈ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯರಾಶಿ ದೊಡ್ಡಮಟ್ಟದಲ್ಲಿ ಸೃಷ್ಟಿಯಾಗಿದೆ. ಮನೆಯ ತ್ಯಾಜ್ಯಗಳನ್ನು ಪ್ಲಾಸ್ಟಿಕ್‌ಗಳಲ್ಲಿ ಗಂಟುಕಟ್ಟಿ ಎಸೆಯಲಾಗಿದೆ. ಹಸಿಕಸ, ಒಣಕಸವನ್ನು ಇಲ್ಲಿ ಎಸೆಯಲಾಗಿದ್ದು, ಡಂಪಿಂಗ್‌ಯಾರ್ಡ್‌ನಂತಾಗಿದೆ.
Related Articles
ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ದೃಷ್ಟಿಯಿಂದ ನಿಟ್ಟೂರು-ಮೂಡನಿಡಂಬೂರು ಬಬ್ಬುಸ್ವಾಮಿ ಗರಡಿವರೆಗೆ ವ್ಯವಸ್ಥಿತ ಯುಜಿಡಿ ಪೈಪ್‌ಲೈನ್‌ಗೆ ಯೋಜನೆ ರೂಪಿಸಲಾಗಿತ್ತು. ಅದರಂತೆ 56 ಲಕ್ಷ ರೂ. ವೆಚ್ಚದಲ್ಲಿ ಟೆಂಡರ್ ಮಾಡಿ ಗುತ್ತಿಗೆದಾರನಿಗೆ ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು. ಗುತ್ತಿಗೆದಾರ ಕಾಮಗಾರಿಗೆ ಆಸಕ್ತಿ ತೋರಿಸದೆ ಹಲವಾರು ತಿಂಗಳು ವಿಳಂಬ ಮಾಡಿದ್ದಾರೆ. ಅನಂತರ ಅಧ್ಯಕ್ಷರ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೂ ಸ್ಪಂದಿಸದಿದ್ದಾಗ ಹಿಂದಿನ ಟೆಂಡರ್ ರದ್ದುಗೊಳಿಸಿ ಮರು ಟೆಂಡರ್ ಕರೆಯಲಾಯಿತು. ಇದೀಗ ಪ್ರಕ್ರಿಯೆ ಪೂರ್ಣಗೊಂಡಿದೆ. ವಾರದೊಳಗೆ ಈ ಕಾಮಗಾರಿ ಆರಂಭವಾಗಲಿದೆ. ಅಲ್ಲದೆ ಶಾಸಕರ ಅನುದಾನದಲ್ಲಿ ಈ ಭಾಗದಲ್ಲಿ1 ಕೋ. ರೂ. ವೆಚ್ಚದಲ್ಲಿ 900 ಮೀಟರ್ ರಸ್ತೆ ಅಭಿವೃದ್ಧಿಗೊಳ್ಳಲಿದೆ.
– ಸಂತೋಷ್ ಕುಮಾರ್, ನಿಟ್ಟೂರು ವಾರ್ಡ್ ಸದಸ್ಯ
Advertisement